ಕರ್ನಾಟಕ ರಾಜ್ಯ ಮಕ್ಕಳ ರಕ್ಷಣಾ ಮಾರ್ಗಸೂಚಿಗಳು ಮತ್ತು ಕಾರ್ಯವಿಧಾನಗಳು

Clysin | Saturday, December 10, 2022


1.1  ಸುರಕ್ಷಿತ ಶಾಲೆಯ ಪರಿಕಲ್ಪನೆ  
*  ಮಗು  ಎದುರಿಸುತ್ತಿರುವ  ಮಾನಸಿಕ,  ಭಾವನಾತ್ಮಕ,  ಗ್ರಹಿಕಾತ್ಮಕ,  ಸಾಮಾಜಿಕ,  ಸಾಂಸ್ಕೃತಿಕ,  ಭೌಗೋಳಿಕ  ಅಥವಾ ಭೌತಿಕ  ಸಂಕಷ್ಟಗಳನ್ನು  ವಿವಿಧ  ಆಯಾಮಗಳಡಿ  ತುಲನೆ  ಮಾಡಿ,  ಶೈಕ್ಷಣಿಕ  ಸಂಸ್ಥೆಗಳು  ಮಕ್ಕಳಿಗೆ  ಸುರಕ್ಷಿತ ಪರಿಸರದ  ರಕ್ಷಣೆ  ನೀಡುವುದನ್ನು  ಖಾತರಿಪಡಿಸಿಕೊಳ್ಳಲು  ಸಮಗ್ರ  ವಿಧಾನವನ್ನು  ಅಳವಡಿಸಿಕೊಳ್ಳುವ  ಅವಶ್ಯಕತೆ ಇದೆ. ಮಕ್ಕಳ ರಕ್ಷಣೆಯ ವಿಧಾನವು ಮಗುವಿನ ಶೈಕ್ಷಣಿಕ ಪರಿಸರ ಹಾಗೂ ಸಮಗ್ರವಾಗಿ ತೊಡಗಿಸಿಕೊಳ್ಳುವಿಕೆಯ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ನಿರ್ವಹಿಸಬೇಕಾಗಿದೆ.
* ಸದೃಢ  ಮತ್ತು  ಪೂರ್ವಭಾವಿ  ಸುರಕ್ಷಿತ  ಶಾಲಾ  ವಾತಾವರಣದ  ನಿರ್ಮಾಣವು  ಭಾರತದ  ಸಂವಿಧಾನ  ಮತ್ತು ಶಾಸನಗಳಡಿಯಲ್ಲಿ  ಮಕ್ಕಳು  ಮತ್ತು  ಅವರ  ಹಕ್ಕುಗಳ  ಕುರಿತಂತೆ  ತಿಳಿಸಿರುವ  ಅಂಶಗಳನ್ನು  ಗೌರವಿಸುವುದರ ಆಧಾರದ ಮೇಲೆ ನಿಂತಿದೆ ಮತ್ತು ಹಲ್ಲೆ, ಕಿರುಕುಳ ಮತ್ತು ನಿಂದನೆಯಿಂದ ಮುಕ್ತವಾಗಿದೆ. ಶಿಕ್ಷಕರು, ಪೋಷಕರು, ಸಮುದಾಯ, ಇತರೆ ಶಾಲೆಗಳು ಮತ್ತು ಪ್ರಮುಖವಾಗಿ ಮಕ್ಕಳೂ ಸೇರಿದಂತೆ ಇತರೆ ಭಾಗೀದಾರರ ಜೊತೆಗೂಡಿ ಕಾರ್ಯನಿರ್ವಹಿಸುವುದಾಗಿದೆ. ವಿವಿಧ ಭಾಗೀದಾರರು ಒಟ್ಟಾಗಿ ಪೂರ್ವಾಗ್ರಹಗಳನ್ನು ತೊಡೆದುಹಾಕುವ ಮೂಲಕ ಹಾಗೂ  ಮಗುವಿನ  ಘನತೆಯನ್ನು  ಎತ್ತಿಹಿಡಿದು  ಮಕ್ಕಳ  ಹಕ್ಕುಗಳನ್ನು  ವಾಸ್ತವವಾಗಿ  ಸಾಕಾರಗೊಳಿಸಬೇಕಾಗಿದೆ. ಸುರಕ್ಷಿತ ಶಾಲಾ ಪರಿಸರವು, ಮಗುವಿನ ಸಕಾರಾತ್ಮಕ  ಹಾಗೂ ಒಟ್ಟಾರೆ ಬೆಳವಣಿಗೆಗೆ ಪೂರಕ ವಾತಾವರಣವನ್ನು ಕಲ್ಪಿಸುವುದಾಗಿದೆ.
*  ಸುರಕ್ಷಾ  ಶಾಲಾ  ಪರಿಸರದ  ಕಲ್ಪನೆಯು,  ಒಂದು  ಸಮರ್ಥ  ಮತ್ತು  ಸಬಲಗೊಳಿಸುವಿಕೆಯ  ಪ್ರಕ್ರಿಯೆಯಾಗಿದ್ದು, ನಿರ್ಬಂಧಿತ  ಕ್ರಮಗಳಾದ  ಸದಾ  ನಿಗಾ  ವಹಿಸುವಿಕೆ  ಮತ್ತು  ನಿಯಂತ್ರಣ  ಆಧಾರಿತ  ವಿಧಾನವಾಗಿರುವುದಿಲ್ಲ ಎಂಬುದನ್ನು  ನಿರ್ದೇಶಿಸುತ್ತದೆ.  ಇದು  ಮಗುವಿನ  ಭಾಗವಹಿಸುವಿಕೆಯನ್ನು  ಕೇಂದ್ರೀಕರಿಸುವುದನ್ನು  ತಿಳಿಸುತ್ತದೆ ಹಾಗೂ  ಈ  ಮೂಲಕ  ಎಲ್ಲಾ  ಹಕ್ಕುಗಳು  ಮತ್ತು  ಮಕ್ಕಳನ್ನು  ಕೇಂದ್ರೀಕರಿಸಿದ  ಆಶಾದಾಯಕ  ಶಾಲೆಯ ಅವಶ್ಯಕತೆಗಳನ್ನು  ಹೊಂದಲು  ಅನುವು  ಮಾಡಿಕೊಡುವುದು.  ಇದು  ಮಗು  ಸುರಕ್ಷಿತವಾಗಿದೆ  ಎಂದು  ಭಾವಿಸಿ ಪ್ರತಿಕ್ರಿಯಿಸುವ  ವಾತಾವರಣವನ್ನು  ನಿರ್ಮಿಸುವ  ತತ್ತ್ವದಡಿ  ಮಕ್ಕಳೂ  ಸೇರಿದಂತೆ  ಎಲ್ಲಾ  ಭಾಗೀದಾರರು ಭಾಗವಹಿಸಬೇಕಾಗಿದೆ ಎಂಬುದನ್ನು ಆಶಿಸುತ್ತದೆ.
1.2  ಸುರಕ್ಷಿತ ಶಾಲೆಯ ಮೌಲ್ಯಗಳು
1.2.1  ಮಗು ಕೇಂದ್ರಿತ ವಿಧಾನ
*  ಇದು  ಮಕ್ಕಳನ್ನು  ಸಮಗ್ರವಾಗಿ  ನೋಡಿ  ಗುರುತಿಸುವ  ಒಂದು  ಪ್ರಮುಖ  ಮೌಲ್ಯವಾಗಿದ್ದು,  ಪ್ರತಿಯೊಂದು ಮಗುವು  ತನ್ನ  ಅನುಭವಗಳು  ಮತ್ತು  ಅಭಿಪ್ರಾಯಗಳ  ಮೂಲಕ  ಕೊಡುಗೆ  ನೀಡುವುದಾಗಿದೆ.  ಮಗು  ಕೇಂದ್ರಿತ ವಿಧಾನಗಳು  ಮುಖ್ಯವಾಗಿ  ಮಗುವಿನ  ಅತ್ಯುತ್ತಮ  ಹಿತಾಸಕ್ತಿಗಳಾದ  ಅನಿಸಿಕೆ,  ಇಚ್ಛೆ  ಮತ್ತು  ಕಾಳಜಿಯನ್ನು ಪರಿಗಣಿಸಿ  ನಿರ್ಧರಿಸಬಹುದು.  ಇದರಿಂದ  ಎಲ್ಲಾ  ಮಕ್ಕಳಿಗೆ  ಭಾಗವಹಿಸಲು  ಮತ್ತು  ಕಲಿಕೆಯ  ಅವಕಾಶಗಳಿಂದ ಎಲ್ಲಾ  ಪ್ರಯೋಜನಗಳನ್ನು  ಪಡೆಯಲು  ಸಾಧ್ಯವಾಗುತ್ತದೆ.  ಈ  ವಿಧಾನವು  ಒಂದು  ವೇಳೆ  ಮಗುವೇ  ಹಲ್ಲೆ ನಡೆಸಿದ್ದಲ್ಲಿ,  ಮಕ್ಕಳ  ಕುರಿತಾಗಿ  ಇರುವಂತಹ  ಸುಧಾರಣಾತ್ಮಕ  ಮತ್ತು  ಪುನರ್ವಸತಿಯು  ಸೇವೆಗಳಡಿಯಲ್ಲಿ ಪರಿಗಣಿಸುವ ಬಗ್ಗೆ ತಿಳಿಸುತ್ತದೆ.
*   1.2.2  ಸ್ವ-ನಿರ್ಧಾರ
*  ಮಕ್ಕಳು  ತಮ್ಮ  ಜೀವನದ  ಮೇಲೆ  ಪರಿಣಾಮ  ಬೀರುವ  ಎಲ್ಲಾ  ವಿಷಯಗಳು  ಹಾಗೂ  ಅವರ  ಸ್ವಂತ ಯೋಗಕ್ಷೇಮಕ್ಕೆ  ಸಂಬಂಧಿಸಿದಂತೆ  ಸ್ವಯಂ  ನಿರ್ಧಾರ  ತೆಗೆದುಕೊಳ್ಳುವ  ಮತ್ತು  ಸಂಬಂಧಿಸಿದ  ತೀರ್ಮಾನಗಳಲ್ಲಿ ಭಾಗವಹಿಸುವ ಹಕ್ಕನ್ನು ಹೊಂದಿರುತ್ತಾರೆ. ಸ್ವ-ನಿರ್ಧಾರವು ಸುರಕ್ಷಿತ ಶಾಲಾ ಪರಿಸರದಲ್ಲಿ ಮಗುವು ಸಕ್ರಿಯವಾಗಿ ತೊಡಗಿಸಿಕೊಳ್ಳಲು  ಮತ್ತು  ಕಾಳಜಿವಹಿಸಬೇಕಾದ  ವಿಷಯಗಳ  ಕುರಿತು  ವರದಿ  ಮಾಡಲು  ಸಮರ್ಥವಾಗಿಸುತ್ತದೆ. ಆದುದರಿಂದ,  ವಯಸ್ಕರ  ಅಭಿಪ್ರಾಯಗಳಿಗಿಂತ  ಮಕ್ಕಳ  ಅಭಿಪ್ರಾಯಗಳು  ಭಿನ್ನವಾಗಿದ್ದಾಗಲೂ  ಮಕ್ಕಳ ಅಭಿಪ್ರಾಯಗಳನ್ನು  ಗೌರವಿಸುವ,  ಆಲಿಸುವ  ಮತ್ತು  ಮಕ್ಕಳು  ತಮ್ಮ  ಅಭಿಪ್ರಾಯಗಳನ್ನು  ವ್ಯಕ್ತಪಡಿಸಲು ಪ್ರೋತ್ಸಾಹದಾಯಕ ವಾತಾವರಣ ನಿರ್ಮಿಸುವುದಾಗಿದೆ.
*   1.2.3  ಮಗುವಿನ ಭಾಗವಹಿಸುವಿಕೆ
*  ಮಗುವಿನ  ಭಾಗವಹಿಸುವಿಕೆಯು  ಶಾಲೆಗೆ  ಸಂಬಂಧಿಸಿದ  ಎಲ್ಲಾ  ಚಟುವಟಿಕೆಗಳಲ್ಲಿ  ಮಕ್ಕಳು  ಸಕ್ರಿಯವಾಗಿ ಭಾಗವಹಿಸುವುದಾಗಿದೆ.  ಮಕ್ಕಳ  ಮಾತನ್ನು  ಆಲಿಸುವ  ಮತ್ತು  ಅವರ  ಅಭಿಪ್ರಾಯಗಳನ್ನು  ವ್ಯಕ್ತಪಡಿಸಲು ಅವಕಾಶಗಳನ್ನು ನೀಡಿ ಶಾಲೆಯ ಒಳಗೆ ಮತ್ತು ಹೊರಗೆ ಶೈಕ್ಷಣಿಕ ಚಟುವಟಿಕೆಗಳ ಯೋಜನೆ, ಸಂಘಟನೆ ಮತ್ತು ಶೈಕ್ಷಣಿಕ  ಚಟುವಟಿಕೆಗಳ  ಮೌಲ್ಯಮಾಪನದಲ್ಲಿ  ತೊಡಗಿಸಿಕೊಂಡು  ಅವರ  ಪ್ರೌಢತೆ  ಮತ್ತು  ಸಾಮಥ್ರ್ಯವನ್ನು ಗಣನೆಗೆ ತೆಗೆದುಕೊಳ್ಳುವುದು.  
1.2.4  ಮಕ್ಕಳ ಸ್ನೇಹಿ ಭಾಷೆ
*  ಮಕ್ಕಳೊಂದಿಗೆ  ನಡೆಸುವ  ಎಲ್ಲಾ  ಸಂವಹನವು  ಮಕ್ಕಳ  ಸ್ನೇಹಿಯಾಗಿದ್ದು,  ಅವರ  ವಯಸ್ಸಿಗೆ ಅನುಗುಣವಾಗಿರಬೇಕು  ಮತ್ತು  ಸಂವಹನವು  ಮಗುವಿನ  ಭಯ  ಹುಟ್ಟಿಸುವಿಕೆ  ಅಥವಾ  ಮುಜುಗರ,  ಅವಮಾನ ಅಥವಾ ಅವರ ಸ್ವಾಭಿಮಾನ ಮತ್ತು ಘನತೆಯನ್ನು ಕೆಳಮಟ್ಟಕ್ಕೆ ಇಳಿಸುವಂತಿರಬಾರದು.
*   1.2.5  ತಾರತಮ್ಯರಹಿತ ಅವಕಾಶ ಕಲ್ಪಿಸುವಿಕೆ
*  ಸುರಕ್ಷಿತ  ಶಾಲೆಗಳು,  ಬದಲಿಸಲಾಗದ  ತತ್ವಗಳಾದ  ಸಮಾನತೆ,  ನ್ಯಾಯ  ಮತ್ತು  ತಾರತಮ್ಯರಹಿತ ಆಧಾರಿತವಾಗಿರುತ್ತವೆ.  ಶಾಲೆಗಳು  ಎಲ್ಲಾ  ಮಕ್ಕಳಿಗೆ  ಸಮಾನ  ಕಲಿಕೆ  ಮತ್ತು  ಬೆಳವಣಿಗೆ  ಅವಕಾಶಗಳನ್ನು ಒದಗಿಸುವುದನ್ನು  ಖಚಿತಪಡಿಸಿಕೊಳ್ಳುವುದು.  ಶಾಲೆಯಲ್ಲಿ  ಇತರೆ  ಮಕ್ಕಳಿಂದ  ಅಥವಾ  ವಯಸ್ಕರಿಂದ  ಮಕ್ಕಳಿಗೆ ಯಾವುದೇ  ರೀತಿಯ  ತಾರತಮ್ಯ  ಮಾಡಿರುವುದು  ಕಂಡುಬಂದಲ್ಲಿ,  ಅಂತಹ  ವಿಷಯಗಳನ್ನು ಪರಿಣಾಮಕಾರಿಯಾಗಿ ನಿಭಾಯಿಸುವುದು.
1.3  ಸುರಕ್ಷಿತ ಶಾಲೆಯ ಉತ್ತೇಜನಕ್ಕೆ ಕಾರ್ಯತಂತ್ರಗಳು   
1.3.1  ಮಕ್ಕಳ ಸ್ವಯಂ ರಕ್ಷಣೆಗೆ ಮಕ್ಕಳನ್ನೇ ಪ್ರಾಥಮಿಕ ಘಟಕಗಳಾಗಿ ಗುರುತಿಸುವುದು
*  ಮಕ್ಕಳನ್ನು  ಇಂದು  ಹಕ್ಕುಗಳ  ವಿಷಯವನ್ನಾಗಿ  ಗುರುತಿಸಲಾಗಿದೆಯೇ  ಹೊರತು  ಅವರು  ಕೇವಲ  ಸಂರಕ್ಷಣೆಯ ವಸ್ತುಗಳಲ್ಲ  ಎನ್ನುವುದನ್ನು  ಶಾಲೆಗಳು  ಒಪ್ಪಿಕೊಳ್ಳುವ  ಅವಶ್ಯಕತೆ  ಇದೆ.  ಆದುದರಿಂದ  ಮಕ್ಕಳ  ರಕ್ಷಣಾ  ನೀತಿ ಮತ್ತು  ಕಾರ್ಯವಿಧಾನಗಳನ್ನು  ಸಿದ್ಧಪಡಿಸುವಲ್ಲಿ  ಮತ್ತು  ಅನುಷ್ಠಾನಗೊಳಿಸುವಲ್ಲಿ  ಮಗುವಿನ ಭಾಗವಹಿಸುವಿಕೆಯನ್ನು ಖಾತರಿಪಡಿಸಿಕೊಳ್ಳುವುದು.
ಮಕ್ಕಳ ಭಾಗವಹಿಸುವಿಕೆಯನ್ನು ಖಾತರಿಪಡಿಸುವಿಕೆಯಲ್ಲಿ ಕೆಳಕಂಡ ಅಂಶಗಳು ಪ್ರಮುಖವಾಗಿವೆ;
*  ಮಕ್ಕಳು ಎದುರಿಸುತ್ತಿರುವ ಹಲವಾರು ಸಮಸ್ಯೆಗಳು ಗೋಚರಿಸದೆ ಇರಬಹುದು ಅಥವಾ ಗೋಚರಿಸಬಹುದು. ಆದರೆ ಅವುಗಳು ಅತ್ಯಂತ ಸೂಕ್ಷ್ಮವಾಗಿದ್ದು, ಅವುಗಳಿಗೆ ಸುತ್ತಲಿನ ವಯಸ್ಕರು ಸೂಕ್ಷ್ಮವಾಗಿ ಗ್ರಹಿಸಬೇಕಾದ ಅವಶ್ಯಕತೆಯನ್ನು ಗುರುತಿಸುವುದು.
*  ಕೆಲವೊಮ್ಮೆ  ಮಕ್ಕಳು  ಅದರಲ್ಲೂ  ವಿಶೇಷವಾಗಿ,  ಬಲವಂತದ  ಸಂದರ್ಭಗಳಲ್ಲಿ  ಮುಕ್ತವಾಗಿ  ಸಂವಹನ  ನಡೆಸುವುದು ಬಹಳ  ಕಷ್ಟಕರ  ಎನ್ನುವುದು  ಸವರ್ೇ  ಸಾಮಾನ್ಯವಾಗಿದೆ.  ಆದುದರಿಂದ  ಎಲ್ಲಾ  ಶಾಲಾ  ಚಟುವಟಿಕೆಗಳಲ್ಲಿ  ಮಕ್ಕಳ ಕ್ರಿಯಾಶೀಲ  ಭಾಗವಹಿಸುವಿಕೆಯನ್ನು  ಉತ್ತೇಜಿಸುವ  ದೃಷ್ಟಿಯಿಂದ,  ಪ್ರತಿಯೊಬ್ಬರೂ  ನೈತಿಕ  ಭಾಗವಹಿಸುವಿಕೆಯ ಮೂರು  ಅವಶ್ಯಕತೆಗಳನ್ನು  ಕಡ್ಡಾಯವಾಗಿ  ಅರ್ಥಮಾಡಿಕೊಳ್ಳಬೇಕಾಗಿದೆ.  ಈ  ಅವಶ್ಯಕತೆಗಳನ್ನು  ಮಕ್ಕಳ  ಹಕ್ಕುಗಳ ಸಮಿತಿಯ ಸಾಮಾನ್ಯ ಅಭಿಪ್ರಾಯ ಸಂಖ್ಯೆ 12 ರಲ್ಲಿ  ಅಹವಾಲನ್ನು  ಹೇಳಿಕೊಳ್ಳುವ  ಮಕ್ಕಳ  ಹಕ್ಕುಗಳನ್ನು  ನಿರೂಪಿಸಲಾಗಿದ್ದು,  ಕೆಳಗಿನ ಅಂಶಗಳನ್ನು ಗಮನಿಸುವುದು.
ಅ. ಪಾರದರ್ಶಕ ಮತ್ತು ಉಪಯುಕ್ತ ಮಾಹಿತಿ
ಮಕ್ಕಳು  ತಮ್ಮ  ಹಕ್ಕುಗಳನ್ನು  ಕುರಿತ  ಅಭಿಪ್ರಾಯಗಳನ್ನು  ಮುಕ್ತವಾಗಿ  ವ್ಯಕ್ತಪಡಿಸಲು  ಸಂಪೂರ್ಣವಾದ  ಹಾಗೂ ವಯಸ್ಸಿಗೆ  ಅನುಗುಣವಾಗಿ  ಮಾಹಿತಿಯನ್ನು  (ಮಕ್ಕಳ  ವೈವಿಧ್ಯತೆಯ  ಸಂವೇದನೆಯೂ  ಸಹ  ಆಗಿರಬಹುದು) ಕಡ್ಡಾಯವಾಗಿ  ಒದಗಿಸುವುದು.  ಮಾಹಿತಿಯಲ್ಲಿ  ಅವರ  ಅಭಿಪ್ರಾಯಗಳಿಗೆ  ಹೇಗೆ  ಹೆಚ್ಚಿನ  ಮನ್ನಣೆ  ನೀಡುವುದು, ಭಾಗವಹಿಸುವಿಕೆಯ  ಕ್ರಮ  ಹೇಗೆ  ಇರುತ್ತದೆ,  ಅದರ  ವ್ಯಾಪ್ತಿ,  ಉದ್ದೇಶ  ಮತ್ತು  ಸಂಭವನೀಯ  ಪರಿಣಾಮ ಮುಂತಾದವುಗಳನ್ನು ಅದು ಒಳಗೊಂಡಿರುವುದು.
ಆ. ಸ್ವ-ಇಚ್ಛೆಯಿಂದ ಭಾಗವಹಿಸುವಿಕೆ
ಮಕ್ಕಳು  ತಮ್ಮ  ಇಚ್ಛೆಗಳನ್ನು  ವ್ಯಕ್ತಪಡಿಸುವುದಕ್ಕೆ  ನಿರ್ಬಂಧಗಳನ್ನು  ಹೇರಬಾರದು  ಮತ್ತು  ಇದು  ಅವರ ಭಾಗವಹಿಸುವಿಕೆಗೆ ಅಡ್ಡಿಯಾಗುತ್ತದೆ ಎನ್ನುವುದರ ಬಗ್ಗೆ ಅವರಿಗೆ ಮಾಹಿತಿ ನೀಡುವುದು.
ಇ. ಪಾರದರ್ಶಕ ಮತ್ತು ಉಪಯುಕ್ತ ಮಾಹಿತಿ
ಮಕ್ಕಳ  ಅಭಿಪ್ರಾಯಗಳನ್ನು  ಗೌರವದಿಂದ  ಸ್ವೀಕರಿಸುವುದು  ಮತ್ತು  ಮಕ್ಕಳಿಗೆ  ಚರ್ಚೆ  ಹಾಗೂ  ಚಟುವಟಿಕೆಗಳಲ್ಲಿ ಭಾಗವಹಿಸುವ ಅವಕಾಶಗಳನ್ನು ನೀಡಲು ಪ್ರಾರಂಭಿಸುವುದು.
ಈ. ಪ್ರಸ್ತುತತೆ  
ಮಕ್ಕಳು  ಯಾವ  ವಿಷಯಗಳ  ಬಗ್ಗೆ  ತಮ್ಮ  ಅಭಿಪ್ರಾಯಗಳನ್ನು  ವ್ಯಕ್ತಪಡಿಸುವ  ಹಕ್ಕನ್ನು  ಹೊಂದಿರುತ್ತಾರೋ  ಅವು ಜೀವನದ  ನೈಜ  ಮತ್ತು  ವಾಸ್ತವದ  ಬದುಕಿಗೆ  ಹತ್ತಿರವಾಗಿರಬೇಕು  ಮತ್ತು  ಅವರ  ಜ್ಞಾನ,  ಕೌಶಲ್ಯಗಳು  ಮತ್ತು ಸಾಮಥ್ರ್ಯಗಳನ್ನು  ಪಡೆಯಲು  ಸಮರ್ಥವಾಗಿರುವಂತಿರಬೇಕು.  ಮುಂದುವರೆದು  ಮಕ್ಕಳು  ಸ್ವತಃ  ಗುರುತಿಸಿರುವ  ನೈಜ ಮತ್ತು ಪ್ರಮುಖ ಸಮಸ್ಯೆಗಳನ್ನು ಗುರುತಿಸಿ, ಬಗೆಹರಿಸುವ ಅವಕಾಶಗಳನ್ನು ಮಕ್ಕಳಿಗೆ ಕಲ್ಪಿಸುವ ಅಗತ್ಯವಿದೆ.
ಉ. ಮಕ್ಕಳ ಸ್ನೇಹಿ ವಾತಾವರಣ
 ಮಕ್ಕಳ  ಸಾಮಥ್ರ್ಯಕ್ಕೆ  ತಕ್ಕಂತೆ  ಪರಿಸರ  ಮತ್ತು  ಕಾರ್ಯನಿರ್ವಹಣಾ  ವಿಧಾನಗಳನ್ನು  ಅಳವಡಿಸಿಕೊಳ್ಳುವುದು.  ಮಕ್ಕಳು ತಮ್ಮ  ಅಭಿಪ್ರಾಯಗಳನ್ನು  ವ್ಯಕ್ತಪಡಿಸಲು  ಅವರಿಗೆ  ಸಾಕಷ್ಟು  ಸಮಯ  ಮತ್ತು  ಸಂಪನ್ಮೂಲಗಳನ್ನು  ಒದಗಿಸುವ ಮೂಲಕ ಅವರು ಸಮರ್ಪಕರಾಗಿ ಸಿದ್ಧರಾಗುವಂತೆ ಆತ್ಮಸ್ಥೈರ್ಯ ಬೆಳೆಸಿಕೊಳ್ಳಲು ಅವಕಾಶಗಳನ್ನು ನೀಡುವುದು.

Previous
Next Post »

No comments:

Post a Comment

Copyright © Clysin. All rights reserved.