ಕ್ರೀಡೆಗಳು ಮತ್ತು ಸಾಂಸ್ಕೃತಿಕ ಚಟುವಟಿಕೆಗಳು

Clysin | Thursday, January 5, 2023

  ಆಟದ ಮೈದಾನಗಳನ್ನು ಸ್ಥಾಪಿಸುವುದು ಹಾಗೂ ಅವುಗಳನ್ನು ನಿರ್ವಹಿಸುವುದು
  ಕಲೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಗುರುತಿಸುವುದು
  ಗ್ರಾಮ  ಪಂಚಾಯಿತಿ  ಮಟ್ಟದಲ್ಲಿ  ಸಾಂಸ್ಕೃತಿಕ  ಚಟುವಟಿಕೆಗಳನ್ನು  ಸಂರಕ್ಷಿಸುವುದು  ಮತ್ತು ಪುನರುಜ್ಜೀವನಗೊಳಿಸುವುದು
  ಯೂಥ್ ಕ್ಲಬ್ಗಳಿಗೆ ಉತ್ತೇಜನ ನೀಡುವುದು
  ಬಡ  ಮತ್ತು  ನಿರ್ಗತಿಕ  ಕಲಾವಿದರಿಗೆ  ನೆರವು  ನೀಡುವುದು  ಮತ್ತು  ಅವರಿಗೆ  ರಕ್ಷಣೆ ಒದಗಿಸವುದು
  ಕೋಮು ಮತ್ತು ಧಾರ್ಮಿಕ ಸೌಹಾರ್ದತೆಯನ್ನು ಕಾಪಾಡುವುದು
  ಗ್ರಾಮ  ಪಂಚಾಯಿತಿ  ಮತ್ತು  ಸಮೂಹ  ಮಟ್ಟಗಳಲ್ಲಿ  ಸಾಂಸ್ಕೃತಿಕ  ಕೇಂದ್ರಗಳು,  ಸಮುದಾಯ ಭವನಗಳು,  ಬಯಲು  ರಂಗಮಂದಿರಗಳನ್ನು  ನಿರ್ಮಿಸುವುದು  ಮತ್ತು  ಅವುಗಳನ್ನು ನಿರ್ವಹಿಸುವುದು
  ಗ್ರಾಮ  ಪಂಚಾಯಿತಿ  ಮತ್ತು  ಸಮೂಹ  ಮಟ್ಟಗಳಲ್ಲಿ  ಯುವಜನ  ಉತ್ಸವಗಳನ್ನು ಏರ್ಪಡಿಸುವುದು
  ಯುವಕರಿಗೆ  ಜೀವನ  ಕೌಶಲ್ಯ  ಶಿಕ್ಷಣ  ಮತ್ತು  ನಾಯಕತ್ವ  ತರಬೇತಿ  ನೀಡುವುದು  ಹಾಗೂ ಮನರಂಜನಾ ಚಟುವಟಿಕೆಗಳನ್ನು ಆಯೋಜಿಸುವುದು.
18.  ಮಾರುಕಟ್ಟೆ ಸೌಲಭ್ಯ ಕಲ್ಪಿಸುವುದು ಮತ್ತು ದನಗಳ ಜಾತ್ರೆಗಳನ್ನು ಒಳಗೊಂಡಂತೆ ಜಾತ್ರೆಗಳನ್ನು ನಡೆಸುವುದು
  ಗ್ರಾಮ  ಪಂಚಾಯಿತಿ  ಮಟ್ಟದಲ್ಲಿ  ಸಾರ್ವಜನಿಕ  ಮಾರುಕಟ್ಟೆಗಳನ್ನು  ಸ್ಥಾಪಿಸುವುದು,  ಮಾರುಕಟ್ಟೆ ಸೌಲಭ್ಯಗಳನ್ನು ಕಲ್ಪಿಸುವುದು ಮತ್ತು ಅವುಗಳನ್ನು ನಿರ್ವಹಿಸುವುದು
 ದನಗಳ  ಜಾತ್ರೆಗಳನ್ನು  ಒಳಗೊಂಡಂತೆ,  ಜಾತ್ರೆಗಳನ್ನು  ಮತ್ತು  ಉತ್ಸವಗಳನ್ನು  ನಿಯಂತ್ರಿಸುವುದು ಮತ್ತು ನಡೆಸುವುದು
  ಗ್ರಾಮೀಣ  ಕೃಷಿ  ಉತ್ಪನ್ನಗಳು  ಮತ್ತು  ಕರಕುಶಲ  ಉತ್ಪನ್ನಗಳನ್ನು  ನಿರ್ವಹಿಸುವುದು  ಮತ್ತು ಅವುಗಳ ಮಾರುಕಟ್ಟೆ ಉತ್ತೇಜನ ನೀಡುವುದು
  ಕೃಷಿ ಉತ್ಪನ್ನಗಳಿಗೆ ದಾಸ್ತಾನು ಮತ್ತು ಶೀತಲ ದಾಸ್ತಾನು ಸೌಲಭ್ಯಗಳನ್ನು ಒದಗಿಸುವುದು
  ಕೃಷಿ ಉತ್ಪನ್ನದ ನೇರ ಮಾರುಕಟ್ಟೆ ಮತ್ತು ಇ-ಮಾರಾಟಕ್ಕಾಗಿ ರೈತರಿಗೆ ಸೌಲಭ್ಯ ಕಲ್ಪಿಸುವುದು
19.  ಸಾರ್ವಜನಿಕ  ಆರೋಗ್ಯ  (ಆಸ್ಪತ್ರೆಗಳು,  ಸಾರ್ವಜನಿಕ  ಆರೋಗ್ಯ  ಕೇಂದ್ರಗಳನ್ನು  ಒಳಗೊಂಡ  ಆರೋಗ್ಯ)  ಮತ್ತು ಕುಟುಂಬ ಕಲ್ಯಾಣ
  ಗ್ರಾಮ  ಪಂಚಾಯಿತಿ  ಮಟ್ಟದಲ್ಲಿ  ಅಲೋಪಥಿಕ್  ಮತ್ತು  ಆಯುರ್ವೇದ,  ಸಿದ್ಧ,  ಯುನಾನಿ ಹಾಗೂ  ಪ್ರಕೃತಿ  ಚಿಕಿತ್ಸೆ  ಮತ್ತು  ಯೋಗದಂಥ  ಭಾರತೀಯ  ವೈದ್ಯಕೀಯ  ಪದ್ಧತಿಗಳ  ಆರೋಗ್ಯ ಸೌಲಭ್ಯಗಳನ್ನು ಮೇಲ್ವಿಚಾರಣೆ ಮಾಡುವುದು
  ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಆರೋಗ್ಯ ಉಪ-ಕೇಂದ್ರದ ಸ್ಥಾಪನೆಗಾಗಿ ಸಕ್ಷಮ ಪ್ರಾಧಿಕಾರಕ್ಕೆ ಪ್ರಸ್ತಾವಗಳನ್ನು  ಕಳುಹಿಸುವುದು  ಮತ್ತು  ಅವುಗಳಿಗೆ  ಮಂಜೂರಾತಿ  ಪಡೆಯುವುದು  ಹಾಗೂ ಆರೋಗ್ಯ ಸೇವೆಗಳನ್ನು ಒದಗಿಸುವುದು ಸೌಲಭ್ಯ ಕಲ್ಪಿಸುವುದು ಮತ್ತು ಅವುಗಳ ಮೇಲ್ವಿಚಾರಣೆ ಮಾಡುವುದು, ಔಷಧಾಲಯಗಳನ್ನು ಒದಗಿಸುವುದು
  ಗ್ರಾಮ  ಪಂಚಾಯಿತಿ  ಮಟ್ಟದಲ್ಲಿ  ಕುಟುಂಬ  ಕಲ್ಯಾಣ  ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವುದು
  ಲಸಿಕೆ ನೀಡುವ ಹಾಗೂ ಇತರೆ ರೋಗ ನಿರೋಧಕ ಕ್ರಮಗಳನ್ನು ಕೈಗೊಳ್ಳುವುದು
 ತಿನಿಸು ಹಾಗೂ ಮನರಂಜನಾ ಸಂಸ್ಥೆಗಳಿಗೆ ಲೈಸೆನ್ಸ್ ನೀಡುವುದು
  ತೊಂಡು ನಾಯಿಗಳು, ಬೀದಿ ನಾಯಿಗಳನ್ನು ಕೊಲ್ಲುವುದು
  ಸಾಂಕ್ರಾಮಿಕ  ರೋಗಗಳ  ತಡೆಗಾಗಿ  ಮತ್ತು  ಅವುಗಳ  ವಿರುದ್ಧ  ಪರಿಹಾರಾತ್ಮಕ  ಕ್ರಮಗಳನ್ನು ಜಾರಿಗೆ ತರುವುದು
 ಪ್ರಸೂತಿ ಹಾಗೂ ಶಿಶು ಕಲ್ಯಾಣ ಕೇಂದ್ರಗಳ ಮೇಲ್ವಿಚಾರಣೆ ಮಾಡುವುದು
  ಮಾಂಸ,  ಮೀನು  ಮತ್ತು  ಇತರ  ಹಾಳಾಗುವ  ಆಹಾರ  ಪದಾರ್ಥಗಳ  ಮಾರಾಟವನ್ನು ನಿಯಂತ್ರಿಸುವುದು
20.  ನೈರ್ಮಲ್ಯ
 ಸಾರ್ವಜನಿಕ  ರಸ್ತೆಗಳು,  ಚರಂಡಿಗಳು,  ಸ್ನಾನ  ಘಟ್ಟದ  ಕೊಳಗಳು,  ಬಾವಿಗಳು,  ಕೊಳಗಳು ಮತ್ತು ಇತರ ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛವಾಗಿರಿಸಿಕೊಳ್ಳುವುದು ಹಾಗೂ ಸಂರಕ್ಷಿಸುವುದು
  ಸ್ಮಶಾನ ಹಾಗೂ ಸಮಾಧಿ ಭೂಮಿಗಳನ್ನು ಸ್ಥಾಪಿಸುವುದು ಮತ್ತು ನಿರ್ವಹಿಸುವುದು
  ದ್ರವ ತ್ಯಾಜ್ಯ ನಿರ್ವಹಣಾ ವ್ಯವಸ್ಥೆಯನ್ನು ಸ್ಥಾಪಿಸುವುದು ಮತ್ತು ಅದನ್ನು ನಿರ್ವಹಿಸುವುದು
  ಬಹು  ಗ್ರಾಮ  ಘನ  ತ್ಯಾಜ್ಯ  ನಿರ್ವಹಣಾ  ಸ್ಥಾವರಗಳಿಗೆ  ಘನ  ತ್ಯಾಜ್ಯವನ್ನು  ಸಂಗ್ರಹಿಸುವುದು, ಬೇರ್ಪಡಿಸುವುದು ಮತ್ತು ರವಾನಿಸುವುದು
  ವೈಯಕ್ತಿಕ,  ಸಮುದಾಯಿಕ  ಶೌಚಾಲಯಗಳು  ಮತ್ತು  ಸ್ನಾನಗೃಹಗಳು  ಹಾಗೂ  ನೈರ್ಮಲ್ಯ ಸಂಕೀರ್ಣಗಳನ್ನು ನಿರ್ಮಿಸುವುದು ಮತ್ತು ನಿರ್ವಹಿಸುವುದು
  ವಾಸಸ್ಥಳಗಳು,  ಸಾರ್ವಜನಿಕ  ಸ್ಥಳಗಳು  ಮತ್ತು  ಎಲ್ಲಾ  ಸ್ಥಳಿಯ  ಸಂಸ್ಥೆಗಳನ್ನು  ಒಳಗೊಂಡಂತೆ ಗ್ರಾಮ  ಪಂಚಾಯಿತಿ  ಮಟ್ಟದಲ್ಲಿನ  ನೈರ್ಮಲ್ಯ  ಕಾರ್ಯಕ್ರಮವನ್ನು  ಯೋಜಿಸುವುದು  ಮತ್ತು ಅದನ್ನು ಅನುಷ್ಠಾನಗೊಳಿಸುವುದು
 ಆರೋಗ್ಯ  ಮತ್ತು  ನೈರ್ಮಲ್ಯ  ನೀತಿಯನ್ನು  ಅಭಿವೃದ್ಧಿ  ಪಡಿಸುವುದು  ಮತ್ತು  ಅದನ್ನು ಅನುಷ್ಠಾನಗೊಳಿಸುವುದು
 ಕ್ಲೇಮು  ಮಾಡದ  ಪ್ರಾಣಿಗಳ  ಮತ್ತು  ಮೃತ  ದೇಹಗಳನ್ನು  ವಿಲೆ  ಮಾಡುವುದು  ಹಾಗೂ ಚರ್ಮಗಳನ್ನು  ಮತ್ತು  ತೊಗಲುಗಳನ್ನು  ಹದ  ಮಾಡುವುದನ್ನು,  ಸಂಸ್ಕರಿಸುವುದನ್ನು  ಹಾಗೂ ಬಣ್ಣ ಹಾಕುವುದನ್ನು ನಿಯಂತ್ರಿಸುವುದು
 ಗ್ರಾಮ  ಪಂಚಾಯಿತಿ  ಮಟ್ಟದಲ್ಲಿ  ನೈರ್ಮಲ್ಯ  ಮತ್ತು  ತ್ಯಾಜ್ಯ  ನಿರ್ವಹಣಾ  ಕಾರ್ಯಕ್ರಮಗಳ ಅನುಷ್ಠಾನ
  21.  ಮಹಿಳಾ ಮತ್ತು ಮಕ್ಕಳ ಕಲ್ಯಾಣ, ವಿಶೇಷವಾಗಿ ವಿಕಲಚೇತನರು ಮತ್ತು ಮಾನಸಿಕ ಸವಾಲುಗಳುಳ್ಳವರ ಕಲ್ಯಾಣ
  ಮಹಿಳಾ  ಮತ್ತು  ಮಕ್ಕಳ  ಕಲ್ಯಾಣ  ಅಬಿವೃದ್ಧಿ  ಕಾರ್ಯಕ್ರಮಗಳ  ಅನುಷ್ಠಾನ  ಮತ್ತು ಮೇಲ್ವಿಚಾರಣೆಯಲ್ಲಿ ಪಾಲ್ಗೊಳ್ಳುವುದು
  ಶಾಲಾ  ಮಕ್ಕಳಿಗಾಗಿ  ಆರೋಗ್ಯ  ಮತ್ತು  ಪೋಷಕ  ಆಹಾರ  ಕಾರ್ಯಕ್ರಮಗಳ  ಯೋಜನೆ ಸಿದ್ಧಪಡಿಸುವ  ಕಾರ್ಯದ  ಮತ್ತು  ಅದರ  ಅನುಷ್ಠಾನದ  ಮೇಲ್ವಿಚಾರಣೆ  ಮತ್ತು  ಅದರಲ್ಲಿ ಪಾಲ್ಗೊಳ್ಳುವುದು
  ಮಹಿಳಾ  ಮತ್ತು  ಮಕ್ಕಳ  ಅಭಿವೃದ್ಧಿ  ಹಾಗೂ  ಸಬಲೀಕರಣ  ಕಾರ್ಯಕ್ರಮಗಳಲ್ಲಿ  ಸ್ಥಳೀಯ ಅಭಿವೃದ್ಧಿ  ಏಜೆನ್ಸಿಗಳು,  ಖಾಸಗಿ  ಏಜೆನ್ಸಿಗಳು,  ಸ್ವಯಂ  ಸೇವಾ  ಸಂಘಟನೆಗಳಿಂದ  ನೆರವನ್ನು ಪಡೆಯುವುದನ್ನು ಉತ್ತೇಜಿಸುವುದು
  ಅಂಗನವಾಡಿಗಳ  ಸ್ಥಾಪನೆಗಾಗಿ  ಸಕ್ಷಮ  ಪ್ರಾಧಿಕಾರಗಳಿಗೆ  ಪ್ರಸ್ತಾವಗಳನ್ನು  ಕಳುಹಿಸುವುದು ಮತ್ತು ಅವರಿಂದ ಮಂಜೂರಾತಿ ಪಡೆಯುವುದು
  ಅಂಗನವಾಡಿಗಳ ಮೇಲ್ವಿಚಾರಣೆ ಮಾಡುವುದು
 ನಿರ್ಗತಿಕರು,  ವಿಧವೆಯರು,  ವಯಸ್ಸಾದವರು,  ವಿಶೇಷವಾಗಿ  ವಿಕಲಚೇತನರಿಗೆ  ಪಿಂಚಣಿ, ಮನಸ್ವಿನಿ  ಮುಂತಾದಂತಹ  ವಿವಿಧ  ಸಾಮಾಜಿಕ  ಸುರಕ್ಷಿತ  ಸ್ಕೀಮುಗಳ  ಅಡಿಯಲ್ಲಿ  ಗ್ರಾಮ ಸಭೆಗಳಲ್ಲಿ  ಆಯ್ಕೆಯಾದ  ಫಲಾನುಭವಿಗಳ  ಪಟ್ಟಿಯನ್ನು  ಸಂಬಂಧಪಟ್ಟ  ಇಲಾಖೆಗಳಿಗೆ ಕಳುಹಿಸುವುದು
  ಬಡವರಿಗಾಗಿ  ಗುಂಪು  ವಿಮಾ  ಯೋಜನೆಯನ್ನು  ಅನುಷ್ಠಾನಗೊಳಿಸಲು  ಅನುಕೂಲ ಕಲ್ಪಿಸುವುದು
  ವಿಶೇಷವಾಗಿ  ವಿಕಲಚೇತನರು,  ಮಾನಸಿಕ  ಸವಾಲುಗಳುಳ್ಳವರು  ಮತ್ತು  ಸಾಮಾಜಿಕವಾಗಿ ಬಹಿಷ್ಕೃತರಾದಂಥ/ಹೊರಗುಳಿದಂಥ  ಗುಂಪುಗಳನ್ನು  ಒಳಗೊಂಡು  ಅಂಥವರಿಗಾಗಿ  ಇರುವ ಸಾಮಾಜ  ಕಲ್ಯಾಣ  ಕಾರ್ಯಕ್ರಮಗಳಲ್ಲಿ  ಭಾಗವಹಿಸುವುದು  ಮತ್ತು  ಅಂತಹ ಕಾರ್ಯಕ್ರಮಗಳ ಅನುಷ್ಠಾನದ ಮೇಲ್ವಿಚಾರಣೆ ಮಾಡುವುದು.
22.  ಅನುಸೂಚಿತ ಜಾತಿಗಳು, ಅನುಸೂಚಿತ ಪಂಗಡಗಳು ಮತ್ತು ಇತರೆ ಹಿಂದುಳಿದ ಜಾತಿಗಳ ಅಭಿವೃದ್ಧಿ
  ಅನುಸೂಚಿತ  ಜಾತಿ  ಮತ್ತು  ಅನುಸೂಚಿತ  ಪಂಗಡಗಳ  ಕಾಲೋನಿಯಲ್ಲಿ ಮೂಲಸೌಲಭ್ಯಗಳನ್ನು ಒದಗಿಸುವುದು
  ಆದ್ಯತೆಯ ಮೇರೆಗೆ ಗ್ರಾಮ ಪಂಚಾಯಿತಿಯ ಸ್ವಂತ ಸಂಪನ್ಮೂಲಗಳಿಂದ ಅನುಸೂಚಿತ ಜಾತಿ ಹಾಗೂ ಅನುಸೂಚಿತ ಪಂಗಡಗಳ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ನೆರವನ್ನು ಒದಗಿಸುವುದು
  ಸಮಾಜದ  ದುರ್ಬಲ  ವರ್ಗಗಳಲ್ಲಿ,  ವಿಶೇಷವಾಗಿ  ಅನುಸೂಚಿತ  ಜಾತಿ  ಮತ್ತು  ಅನುಸೀಚಿತ ಪಂಗಡಗಳಲ್ಲಿ  ಕಾನೂನು  ಮತ್ತು  ಇತರ  ವಿಷಯಗಳ  ಕುರಿತು  ಅರಿವು  ಮೂಡಿಸುವ ಕಾರ್ಯಕ್ರಮಗಳನ್ನು  ರೂಪಿಸುವುದು,  ಸಮನ್ವಯಗೊಳಿಸುವುದು  ಹಾಗೂ ಅನುಷ್ಠಾನಗೊಳಿಸುವುದು
  ದುರ್ಬಲ  ವರ್ಗಗಳ  ಕಲ್ಯಾಣ  ಕಾರ್ಯಕ್ರಮಗಳಲ್ಲಿ  ಭಾಗವಹಿಸುವುದು  ಮತ್ತು  ಅವುಗಳ ಅನುಷ್ಠಾನವನ್ನು ನೋಡಿಕೊಳ್ಳುವುದು
  ಅನುಸೂಚಿತ  ಜಾತಿ  ಹಾಗೂ  ಅನುಸೂಚಿತ  ಪಂಗಡ  ಹಾಗೂ  ಹಿಂದುಳಿದ ಸಮುದಾಯಗಳಿಗಾಗಿ  ಗ್ರಾಮ  ಪಂಚಾಯಿತಿ  ಮಟ್ಟದಲ್ಲಿ  ವಿದ್ಯಾರ್ಥಿ  ನಿಲಯಗಳನ್ನು ಸ್ಥಾಪಿಸಲು ಯೋಜಿಸುವುದು ಮತ್ತು ಅದನ್ನು ಮೇಲ್ವಿಚಾರಣೆ ಮಾಡುವುದು
  ವ್ಯಕ್ತಿಗಳು  ಮತ್ತು  ಸಮುದಾಯದ  ಸ್ವಾತಂತ್ರ್ಯ  ಮತ್ತು  ಘನತೆಯನ್ನು  ಕುಗ್ಗಿಸುವ  ಅನುಸೂಚಿತ ಜಾತಿ,  ಅನುಸೂಚಿತ  ಪಂಗಡಗಳು  ಮತ್ತು  ಹಿಂದುಳಿದ  ಸಮುದಾಯಗಳ  ವಿರುದ್ಧದ ಸಾಮಾಜಿಕ ಮತ್ತು ಸಾಂಸ್ಕೃತಿಕ ಆಚರಣೆಗಳನ್ನು ತಡೆಯುವುದು
23.  ಜಾನುವಾರು ಸಾಕಾಣಿಕೆ ಕೇಂದ್ರಗಳು, ಕಾರು/ಆಟೋರಿಕ್ಷಾ ಮತ್ತು ಬಸ್ಸುಗಳ ನಿಲ್ದಾಣಗಳು, ಎತ್ತಿನಗಾಡಿ ನಿಲ್ದಾಣಗಳ ನಿರ್ಮಾಣ ಮತ್ತು ನಿರ್ವಹಣೆ
ಜಾನುವಾರು  ಸಾಕಾಣಿಕೆ  ಕೇಂದ್ರ,  ಸಮುದಾಯ  ಜಾನುವಾರು  ಕೊಟ್ಟಿಗೆಗಳು,  ದನದ  ದೊಡ್ಡಿಗಳು,  ಗ್ರಾಮೀಣ ಬಸ್  ನಿಲ್ದಾಣ,  ರಿಕ್ಷಾ  ನಿಲ್ದಾಣ,  ಟ್ಯಾಕ್ಸಿ/ಆಟೋ  ರಿಕ್ಷಾ  ನಿಲ್ದಾಣ,  ಎತ್ತಿನಗಾಡಿ  ನಿಲ್ದಾಣ,  ಕಸಾಯಿಖಾನೆಗಳು  ಮತ್ತು ವಾಣಿಜ್ಯ ಸಂಕೀರ್ಣಗಳ ನಿರ್ಮಾಣ ಮತ್ತು ನಿರ್ವಹಣೆ

Previous
Next Post »

No comments:

Post a Comment

Copyright © Clysin. All rights reserved.