ಈ ಅನುಸೂಚಿಯಲ್ಲಿ ನಿರೂಪಿಸಿರುವ ವಿಷಯಗಳಿಗೆ ಸಂಬಂಧಪಟ್ಟಂತೆ ಮತ್ತು ಗ್ರಾಮಪಂಚಾಯತಿಯ ಬಳಿ ಖರ್ಚು ಮಾಡುವುದಕ್ಕೆ ಲಭ್ಯವಿರುವ ಗ್ರಾಮ ಪಂಚಾಯತಿ ನಿಧಿಗಳಿಗೆ ಸಂಬಂಧಿಸಿರುವಷ್ಟರ ಮಟ್ಟಿಗೆ ಮತ್ತು ಗ್ರಾಮ ಪಂಚಾಯತಿಗಳಿಗೆ ಸಂಬಂಧಪಟ್ಟಂತೆ ರೂಪಿಸಿರುವ ಜವಾಬ್ದಾರಿ ನಕ್ಷೆಯಲ್ಲಿ ವಿವರಿಸಿರುವಂತೆ ಸಹ ಗ್ರಾಮಪಂಚಾಯತಿ ಪ್ರದೇಶದ ಅಗತ್ಯತೆಗಳನ್ನು ಈಡೇರಿಸುವುದು ಗ್ರಾಮಪಂಚಾಯತ್ಗಳ ಕರ್ತವ್ಯವಾಗಿರತಕ್ಕದ್ದು.
ಈ ಅಧಿನಿಯಮದ ಇತರೆ ಉಪಬಂಧಗಳಿಗೆ ಮತ್ತು ಮಾರ್ಗಸೂಚಿಗಳಿಗೆ ಹಾಗೂ ಸಕರ್ಾರದ ಹಣಕಾಸು, ತಾಂತ್ರಿಕ ಅಥವಾ ಇತರ ನೆರವಿಗೆ ಒಳಪಟ್ಟು, ಗ್ರಾಮ ಪಂಚಾಯತಿಯು ಅಭಿವೃದ್ಧಿಗಾಗಿ ಮತ್ತು ಸಾಮಾಜಿಕ ನ್ಯಾಯಯ ಉದ್ದೇಶಗಳಿಗಾಗಿ ಅನುಸೂಚಿಯಲ್ಲಿ ನಿರೂಪಿಸಿರುವ ವಿಷಯಗಳನ್ನು ನಿರ್ವಹಿಸಲು ಹಾಗೂ ಅವುಗಳಿಗೆ ಸಂಬಂಧಿಸಿದ ಸ್ಕೀಮುಗಳನ್ನು ಸಿದ್ಧಪಡಿಸಲು ಮತ್ತು ಅನುಷ್ಠಾನಗೊಳಿಸಲು ಅಧಿಕಾರ ಹೊಂದಿರತಕ್ಕದ್ದು.
1. ಸಾಮಾನ್ಯ ಪ್ರಕಾರ್ಯಗಳು;
()ಪಂಚಾಯತಿ ಪ್ರದೇಶದ ಅಭಿವೃದ್ಧಿಗಾಗಿ ವಾಷರ್ಿಕ ಯೋಜನೆಗಳನ್ನು ಸಿದ್ಧಪಡಿಸುವುದು.
ವಾರ್ಷಿಕ ಬಜೆಟ್ ಸಿದ್ಧಪಡಿಸುವುದು.
ಪ್ರಕೃತಿ ವಿಕೋಪಗಳಿಗೆ ಪರಿಹಾರವನ್ನು ಒದಗಿಸುವುದು.
ಸಾರ್ವಜನಿಕ ಸ್ವತ್ತುಗಳಲ್ಲಿನ ಅತಿಕ್ರಮಣವನ್ನು ತೊಡೆದುಹಾಕುವುದು.
(ತ) ಸ್ವಯಂ ಸೇವೆಯನ್ನು ಸಂಘಟಿಸುವುದು ಮತ್ತು ಸಮುದಾಯ ಕಾರ್ಯಗಳಿಗಾಗಿ ವಂತಿಗೆ ನೀಡುವುದು.
ಗ್ರಾಮಗಳ ಅತ್ಯಾವಶ್ಯಕ ಅಂಕಿ ಅಂಶಗಳನ್ನು ಇಟ್ಟುಕೊಳ್ಳುವುದು.
2. ಕೃಷಿ, ತೋಟಗಾರಿಕೆ ಮತ್ತು ರೇಷ್ಮೆ ಕೃಷಿ
ಸಮಗ್ರ ಯೋಜನೆಯನ್ನು ತಯಾರಿಸಿ, ಕೃಷಿ, ತೋಟಗಾರಿಕೆ ಮತ್ತು ತರಕಾರಿ ಉತ್ಪಾದನೆಯನ್ನು ಹೆಚ್ಚಿಸುವುದಕ್ಕಾಗಿ ಗ್ರಾಮ ಸಭೆಯೊಂದಿಗೆ ಸಮಾಲೋಚಿಸಿ, ಸಮಗ್ರ ಗ್ರಾಮ ಕೃಷಿ, ತೋಟಗಾರಿಕೆ ಮತ್ತು ರೇಷ್ಮೆ ಕೃಷಿ ಯೋಜನೆಯನ್ನು ಸಿದ್ಧಪಡಿಸುವುದು ಹಾಗೂ ಅವುಗಳ ಕಾರ್ಯಚಟುವಟಿಕೆಗಳ ಮೇಲ್ವಿಚಾರಣೆ ಮಾಡುವುದು;
ಇತರ ಬಂಜರು ಭೂಮಿಯೂ ಸೇರಿದಂತೆ, ಕೃಷಿ ತೋಟಗಾರಿಕೆ ಮತ್ತು ರೇಷ್ಮೆ ಮೇವು ಭೂಮಿಯ (ರಡಿಚಿದಟಿರ) ಗರಿಷ್ಠ ಬಳಕೆಯನ್ನು ಖಚಿತಪಡಿಸಲು ಕೃಷಿ ತೋಟಗಾರಿಕೆ ಮತ್ತು ರೇಷ್ಮೆ ಮೇವು ಭೂಮಿಯ (ರಡಿಚಿದಟಿರ) ಗಳ ಬಂಜರು ಭೂಮಿಗಳ ಯೋಜನೆಗಳನ್ನು ಸಿದ್ಧಪಡಿಸುವುದು ಮತ್ತು ಅಭಿವೃದ್ಧಿಪಡಿಸುವುದು.
ಗ್ರಾಮ ಪಂಚಾಯತ್ ನಿಧಿಗಳಿಂದ, ನರ್ಸರಿಗಳನ್ನು ಸ್ಥಾಪಿಸುವುದು ಮತ್ತು ನಿರ್ವಹಿಸುವುದು.
ಕೃಷಿ ಯಾಂತ್ರೀಕರಣಕ್ಕೆ ಸಂಬಂಧಿಸಿದಂತೆ ಯೋಜನೆಯನ್ನು ಸಿದ್ಧಪಡಿಸುವುದು, ಶಿಫಾರಸ್ಸು ಮಾಡುವುದುಹಾಗೂ ಮೇಲ್ವಿಚಾರಣೆ ಮಾಡುವುದು.
ಸಮೂಹ ಕೃಷಿ ಸಹಕಾರ ಸಂಘಗಳನ್ನು ಸ್ಥಾಪಿಸಿಕೊಳ್ಳುವುದಕ್ಕೆ ಅನುಕೂಲ ಕಲ್ಪಿಸುವುದು.
ಮಣ್ಣು, ನೀರು ಮತ್ತು ಬೀಜ ಸಂರಕ್ಷಣೆಯ ಮೇಲ್ವಿಚಾರಣೆ ಮಾಡುವುದು.
ಜಲಾನಯನ ಪ್ರದೇಶದ ನಿರ್ವಹಣೆಯನ್ನು ಕುರಿತು ಮೇಲ್ವಿಚಾರಣೆ ಮಾಡುವುದು.
ಮಾರುಕಟ್ಟೆ ಧಾರಣೆಯನ್ನು ಪ್ರದರ್ಶಿಸುವುದು.
ಕೃಷಿ ವಿಮಾ ಯೋಜನೆಗಳ ಮೇಲ್ವಿಚಾರಣೆ ಮಾಡುವುದು ಮತ್ತು ಅವುಗಳನ್ನು ಅನುಷ್ಠಾನಗೊಳಿಸುವುದು.
3. ಸಣ್ಣ ನೀರಾವರಿ
ಗ್ರಾಮ ಪಂಚಾಯತ್ ಪ್ರದೇಶದ ಒಳಗಿರುವ 0 - 10 ಹೆಕ್ಟೇರುಗಳವರೆಗಿನ ಅಚ್ಚುಕಟ್ಟು ಪ್ರದೇಶದಲ್ಲಿರುವ ಎಲ್ಲಾ ಸಣ್ಣ ನೀರಾವರಿ ಯೋಜನೆಗಳನ್ನು ಸಿದ್ಧಪಡಿಸುವುದು, ನಿರ್ಮಿಸುವುದು, ನವೀಕರಿಸುವುದು ಮತ್ತು ನಿರ್ವಹಿಸುವುದು.
ಗ್ರಾಮ ಪಂಚಾಯತ್ ಮಟ್ಟದಲ್ಲಿ ಇರುವ, 0 - 10 ಹೆಕ್ಟೇರುಗಳವರೆಗಿನ ಅಚ್ಚುಕಟ್ಟು ಪ್ರದೇಶದಲ್ಲಿರುವ ಅಂತಹ ಎಲ್ಲಾ ಸಣ್ಣ/ಕಿರು ನೀರಾವರಿ ಯೋಜನೆಗಳನ್ನು ಸಕಾಲಿಕವಾಗಿ ನಿರ್ವಹಿಸುವುದು ಮತ್ತು ಅನುಷ್ಠಾನಗೊಳಿಸುವುದು ಹಾಗೂ ಲಭ್ಯ ನೀರನ್ನು ಸಮನಾಗಿ ಹಂಚಿಕೆ ಮಾಡುವುದು ಮತ್ತು ಸಂಪೂರ್ಣವಾಗಿ ಬಳಸಿಕೊಳ್ಳುವುದು.
ಅಂತರ್ಜಲದ ಮರುಪೂರಣ ಮತ್ತು ಮಳೆ ನೀರು ಕೊಯ್ಲಿಗೆ ಸಂಬಂಧಿಸಿದ ಯೋಜನೆಯನ್ನು ಅಭಿವೃದ್ಧಿಪಡಿಸುವುದು ಮತ್ತು ಅನುಷ್ಠಾನಗೊಳಿಸುವುದು.
ಗ್ರಾಮಪಂಚಾಯತ್ ಪ್ರದೇಶದಲ್ಲಿ ಇರುವ ಎಲ್ಲಾ ನೀರಾವರಿ ಮೂಲಗಳ ನಕ್ಷೆ ರೂಪಿಸುವುದನ್ನು ಒಳಗೊಂಡಂತೆ ಅವುಗಳ ದಾಖಲೆಗಳನ್ನು ನಿರ್ವಹಿಸುವುದು.
4. ಪಶುಸಂಗೋಪನೆ, ಹೈನುಗಾರಿಕೆ, ಕೋಳಿ ಸಾಕಾಣಿಕೆ ಮತ್ತು ಮೀನುಗಾರಿಕೆ
ಗ್ರಾಮ ಪಂಚಾಯತ್ಗೆ ವಹಿಸಿಕೊಟ್ಟಿರುವ ಹೈನುಗಾರಿಕೆ, ಕೋಳಿಸಾಕಾಣಿಕೆ, ಹಂದಿ ಸಾಕಾಣಿಕೆ ಮತ್ತು ಕುರಿ ಸಾಕಾಣಿಕೆ ಫಾರ್‍ಗಳನ್ನು ಅಭಿವೃದ್ಧಿಪಡಿಸುವುದಕ್ಕೆ ಸಂಬಂಧಿಸಿದ ಯೋಜನೆಗಳನ್ನು ಅನುಷ್ಠಾನಗೊಳಿಸುವುದು.
ಗ್ರಾಮ ಪಂಚಾಯತ್ಗೆ ವಹಿಸಿಕೊಟ್ಟಿರುವ ಜಾನುವಾರು-ಅಭಿವೃದ್ಧಿ ಸ್ಕೀಮುಗಳನ್ನು ಅನುಷ್ಠಾನಗೊಳಿಸುವುದು.
ಸಾಂಕ್ರಾಮಿಕ ರೋಗಗಳ ಮತ್ತು ಅಂಟುರೋಗಗಳ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳುವುದು.
ಗ್ರಾಮ ಪಂಚಾಯತ್ಗಳ ಅಧೀನದಲ್ಲಿ ಬರುವ ನೀರಾವರಿ ಕಾಮಗಾರಿಗಳಲ್ಲಿ ಮೀನುಗಾರಿಕೆಯನ್ನು ಅಭಿವೃದ್ಧಿಪಡಿಸುವುದಕ್ಕೆ ಸಂಬಂಧಿಸಿದ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸುವುದು.
ಗ್ರಾಮೀಣ ಮೀನು ಮತ್ತು ಮಾಂಸದ ಮಾರುಕಟ್ಟೆಗಳನ್ನು ಸ್ಥಾಪಿಸುವುದು ಹಾಗೂ ನಿರ್ವಹಿಸುವುದು.
ಹುಲ್ಲುಗಾವಲು ಮೇವು ಅಭಿವೃದ್ಧಿಪಡಿಸುವುದು.
5. ಸಾಮಾಜಿಕ ಅರಣ್ಯ
ಬಂಜರು ಭೂಮಿಯ ಅರಣ್ಯೀಕರಣ
ಸಾಮಾಜಿಕ ಅರಣ್ಯ, ಕೃಷಿ ಅರಣ್ಯಗಳನ್ನು ಅಭಿವೃದ್ಧಿಪಡಿಸುವುದು, ಸಾಮಾಜಿಕ ಅರಣ್ಯದ ಉತ್ಪನ್ನಗಳ ಮಾರಾಟ ಸಂಸ್ಥೆಯನ್ನು ಸ್ಥಾಪಿಸುವುದು, ನಿರ್ವಹಿಸುವುದು ಮತ್ತು ಅವುಗಳನ್ನು ವಿಲೆ ಮಾಡುವುದು.
ದನಗಳ ಮೇವಿಗೆ, ಉರುವಲಿಗೆ ಬೇಕಾಗುವ ಮರಗಳನ್ನು ಬೆಳೆಸುವುದು ಮತ್ತು ಹಣ್ಣಿನ ಮರಗಳನ್ನು ಬೆಳೆಸುವುದು.
ಕೃಷಿ ಅರಣ್ಯ ಸ್ಕೀಮನ್ನು ಜಾರಿಗೊಳಿಸುವುದು.
ನರ್ಸರಿಗಳನ್ನು ಸ್ಥಾಪಿಸುವುದು ಮತ್ತು ಅವುಗಳನ್ನು ನಿರ್ವಹಿಸುವುದು.
ಮೀಸಲು ಅರಣ್ಯ, ಸಂರಕ್ಷಿತ ಅರಣ್ಯ, ಮತ್ತು ವನ್ಯ ಜೀವಿಗಳ ಸಂರಕ್ಷಿತ ಪ್ರದೇಶದಲ್ಲಿರುವ ಅರಣ್ಯ ಉತ್ಪನ್ನಗಳ ಹೊರತುಪಡಿಸಿ ಸಣ್ಣ ಅರಣ್ಯ ಪ್ರದೇಶಗಳ ಉತ್ಪನ್ನಗಳನ್ನು ನಿರ್ವಹಿಸುವುದು.
ಸಾಮಾಜಿಕ ಅರಣ್ಯ ನಿರ್ಮಾಣ ಮತ್ತು ಕೃಷಿ ಅರಣ್ಯ ನಿರ್ಮಾಣ ಬೆಳೆಸಲು ಯೋಜನೆ (ಪ್ರಾಜೆಕ್ಟ್)ಗಳನ್ನು ರೂಪಿಸುವುದು ಮತ್ತು ಅವುಗಳನ್ನು ಅನುಷ್ಠಾನಗೊಳಿಸುವುದು.
ಗ್ರಾಮ ಪಂಚಾಯತಿಯ ನಿಯಂತ್ರಣದಲ್ಲಿರುವ ರಸ್ತೆಯ ಬದಿಯಲ್ಲಿ ಮತ್ತು ಇತರ ಸಾರ್ವಜನಿಕ ಸ್ಥಳಗಳಲ್ಲಿ ಮರಗಳನ್ನು ನೆಡುವುದು ಮತ್ತು ಅವುಗಳನ್ನು ಸಂರಕ್ಷಿಸುವುದು.
6. ಪ್ರವಾಸೋದ್ಯಮ
ಗ್ರಾಮ ಪಂಚಾಯತ್ ಪ್ರದೇಶದಲ್ಲಿ ಪ್ರವಾಸಿ ತಾಣಗಳನ್ನು ಗುರುತಿಸುವುದು ಮತ್ತು ಅವುಗಳನ್ನು ಅಭಿವೃದ್ಧಿಪಡಿಸುವುದಕ್ಕೆ ಸಂಬಂಧಿಸಿದಂತೆ ಪ್ರಸ್ತಾವಗಳನ್ನು ಸಲ್ಲಿಸುವುದು.
ಪ್ರವಾಸೋದ್ಯಮದ ಚಟುವಟಿಕೆಗಳಿಗೆ ಅನುಕೂಲ ಕಲ್ಪಿಸಿಕೊಡುವುದು.
ಗ್ರಾಮ ಪಂಚಾಯತ್ಗಳಿಗೆ ವಹಿಸಿಕೊಟ್ಟಿರುವ ಪ್ರವಾಸಿ ಕೇಂದ್ರಗಳಲ್ಲಿ ಮೂಲ ಸೌಕರ್ಯಗಳನ್ನು ಒದಗಿಸುವುದು ಮತ್ತು ಅವುಗಳನ್ನು ನಿರ್ವಹಿಸುವುದು
ಭಾರತ ಪುರಾತನ ಸರ್ವೇಕ್ಷಣಾ ಇಲಾಖೆ ಅಥವಾ ಇತರ ಸ್ಥಳೀಯ ಪ್ರಾಧಿಕಾರಗಳು ಅಥವಾ ಸರ್ಕಾರಿ ಇಲಾಖೆಗಳು ನಿರ್ವಹಿಸುತ್ತಿರುವ ಪ್ರವಾಸಿ ತಾಣಗಳನ್ನು ಹೊರತುಪಡಿಸಿ ಇನ್ನಿತರ ಪ್ರವಾಸಿ ತಾಣಗಳಲ್ಲಿ ಪ್ರವೇಶ ಶುಲ್ಕವನ್ನು ಮತ್ತು ವಾಹನ ನಿಲುಗಡೆ ಶುಲ್ಕಗಳನ್ನು ಸಂಗ್ರಹಿಸುವುದು.
7. ಸಣ್ಣ ಪ್ರಮಾಣದ ಕೈಗಾರಿಕೆಗಳು ಮತ್ತು ಗ್ರಾಮೀಣ ಕೈಗಾರಿಕೆಗಳು ಖಾದಿ, ಕರಕುಶಲ ಕಲೆಗಳು, ಗ್ರಾಮೋದ್ಯೋಗಗಳು, ಹಾಗೂ ಆಹಾರ ಸಂಸ್ಕರಣಾ ಕೈಗಾರಿಕೆಗಳು
ಗುಡಿ ಕೈಗಾರಿಕೆಗಳಿಗೆ ಮತ್ತು ಖಾದಿ ಕೈಗಾರಿಕೆಗಳಿಗೆ, ಕರಕುಶಲ ಕಲೆಗಳಿಗೆ, ಗ್ರಾಮೋದ್ಯೋಗಗಳಿಗೆ, ಆಹಾರ ಸಂಸ್ಕರಣಾ ಕೈಗಾರಿಕೆಗಳಿಗೆ ಹಾಗೂ ಇತರ ಕೃಷಿಯೇತರ ಚಟುವಟಿಕೆಗಳಿಗೆ ಉತ್ತೇಜನ ನೀಡುವುದು.
ಪ್ರದರ್ಶನ, ಮಾರುಕಟ್ಟೆ ಸೌಲಭ್ಯವನ್ನು ವ್ಯವಸ್ಥೆಗೊಳಿಸುವುದು.
ಗುಡಿ ಕೈಗಾರಿಕೆಗಳಿಗೆ ಮತ್ತು ಖಾದಿ ಕೈಗಾರಿಕೆಗಳಿಗೆ, ಕರಕುಶಲ ಕಲೆಗಳಿಗೆ, ಗ್ರಾಮೋದ್ಯೋಗಗಳಿಗೆ, ಆಹಾರ ಸಂಸ್ಕರಣಾ ಕೈಗಾರಿಕೆಗಳಿಗೆ ರಾಜ್ಯ ಸಮಿತಿಗಳ ಮತ್ತು ಅಖಿಲ ಭಾರತ ಸಮಿತಿಗಳ ಸ್ಕೀಮುಗಳನ್ನು ರೂಪಿಸುವುದು ಮತ್ತು ಅವುಗಳನ್ನು ಅನುಷ್ಠಾನಗೊಳಿಸುವುದು.
ಲಭ್ಯವಿರಬಹುದಾದ ಖಚ್ಚಾ ಸಾಮಗ್ರಿಗಳು ಮತ್ತು ಮೌಲ್ಯವರ್ಧಿತ ಉತ್ಪನ್ನಗಳಿಗೆ ಸಂಬಂಧಿಸಿದ ಮಾಹಿತಿ ದತ್ತಾಂಶವನ್ನು ಸಂಗ್ರಹಿಸುವುದು. '
ಮಾರುಕಟ್ಟೆ ಸಮೀಕ್ಷೆ ನಡೆಸುವುದು ಮತ್ತು ಜನರಲ್ಲಿ ಮಾಹಿತಿ ಪ್ರಸಾರ ಮಾಡುವುದು.
ಆಹಾರ ಸಂಸ್ಕರಣೆ ಮತ್ತು ಉತ್ಪನ್ನ ಮಾರಾಟ ಚಟುವಟಿಕೆಗಳನ್ನು ಉತ್ತೇಜಿಸುವುದು.
ಪ್ರಕರಣವನ್ನು ನೋಡಿ ಸಾಮಾನ್ಯ
Clysin | Wednesday, January 4, 2023
Next
« Prev Post
« Prev Post
Previous
Next Post »
Next Post »
No comments:
Post a Comment