(1) ಯಾವನೇ ವ್ಯಕ್ತಿಯು ರಾಷ್ಟ್ರಧ್ವಜ ಅಥವಾ ಸರ್ಕಾರದಿಂದ ಮನ್ನಣೆ ಪಡೆದ ದ್ವಜವನ್ನು ಹೊರತುಪಡಿಸಿ ಯಾವುದೇ ಧ್ವಜವನ್ನು ಗ್ರಾಮ ಪಂಚಾಯತಿ ಅಥವಾ ತಾಲ್ಲೂಕು ಪಂಚಾಯತಿ ಅಥವಾ ಜಿಲ್ಲಾ ಪಂಚಾಯತಿಯ ಕಛೇರಿಯ ಮೇಲೆ ಹಾರಿಸತಕ್ಕದ್ದಲ್ಲ.
(2) (1)ನೇ ಉಪಪ್ರಕರಣವನ್ನು ಉಲ್ಲಂಘಿಸಿದ ಯಾರೇ ವ್ಯಕ್ತಿಯು ಮೂರು ತಿಂಗಳವರೆಗೆ ವಿಸ್ತರಿಸಬಹುದಾದ ಕಾರಾವಾಸದಿಂದ ಅಥವಾ ಐದು ಸಾವಿರ ರೂಪಾಯಿಗಳವರೆಗೆ ವಿಸ್ತರಿಸಬಹುದಾದಂಥ ಜುಲ್ಮಾನೆಯಿಂದ ಅಥವಾ ಅವೆರಡರಿಂದಲೂ ದಂಡಿತನಾಗತಕ್ಕದ್ದು ಮತ್ತು ಅಂಥ ಉಲ್ಲಂಘನೆಯು ಮುಂದುವರೆದ ಸಂದರ್ಭದಲ್ಲಿ, ಉಲ್ಲಂಘನೆಯು ಮುಂದುವರಿದ ಪ್ರತಿಯೊಂದು ದಿನಕ್ಕಾಗಿ ಐದುನೂರು ರೂಪಾಯಿಗಳವರೆಗೆ ವಿಸ್ತರಿಸಬಹುದಾದ ಜುಲ್ಮಾನೆಯಿಂದ ದಂಡಿತನಾಗತಕ್ಕದ್ದು.
308. ರಾಜ್ಯ ಚುನಾವಣಾ ಆಯೋಗ. (1) ಗ್ರಾಮ ಪಂಚಾಯತಿ, ತಾಲ್ಲೂಕು ಪಂಚಾಯತಿ ಅಥವಾ ಜಿಲ್ಲಾ ಪಂಚಾಯತಿಯ ಎಲ್ಲ ಚುನಾವಣೆಗಳಿಗಾಗಿ ಚುನಾವಣಾ ಪಟ್ಟಿಯ ಸಿದ್ಧತೆಯ ಮೇಲ್ವಿಚಾರಣೆ, ನಿರ್ದೆಶನ ಮತ್ತು ನಿಯಂತ್ರಣ ಹಾಗೂ ಚುನಾವಣೆಗಳನ್ನು ನಡೆಸುವುದು 1[ಮತ್ತು ಅಂತಹ ಚುನಾವಣೆಗಳಿಗೆ ಸಂಬಂಧಪಟ್ಟಂತೆ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳ ಸೀಮಾ ನಿರ್ಣಯದ ಮತ್ತು ನೀತಿಸಂಹಿತೆಯನ್ನು ಜಾರಿಗೆ ತರುವುದು]1 ರಾಜ್ಯದ ರಾಜ್ಯಪಾಲರಿಂದ ನೇಮಕ ಮಾಡಲಾಗುವ ರಾಜ್ಯ ಚುನಾವಣಾ ಕವಿೂಷನರ್ ಅವರನ್ನು ಒಳಗೊಂಡ ರಾಜ್ಯ ಚುನಾವಣಾ ಆಯೋಗದಲ್ಲಿ ನಿಹಿತವಾಗತಕ್ಕದ್ದು.
1. 2015ರ ಅಧಿನಿಯಮ ಸಂಖ್ಯೆ 44ರ ಮೂಲಕ ದಿನಾಂಕ: 25.02.2016ರಿಂದ ಸೇರಿಸಲಾಗಿದೆ.
(2) ರಾಜ್ಯ ಚುನಾವಣಾ ಕವಿೂಷನರರ ಸೇವಾ ಷರತುಗ್ತ ಳು ಮತ್ತು ಹುದ್ದೆಯ ಅವಧಿಯು ರಾಜ್ಯಪಾಲರು, ನಿಯಮಗಳನುಸಾರ ನಿರ್ಧರಿಸಿರಬಹುದಾದಂತೆ ಇರತಕ್ಕದ್ದು:
1[(2ಎ) ಆಯುಕ್ತರು, ತಮ್ಮ ಹುದ್ದೆಗೆ ಸ್ವಹಸ್ತಾಕ್ಷರದಲ್ಲಿ ಬರೆದ ರಾಜೀನಾಮೆಯನ್ನು ರಾಜ್ಯಪಾಲರಿಗೆ ಸಲ್ಲಿಸುವ ಮೂಲಕ ತಮ್ಮ ಹುದ್ದೆಗೆ ರಾಜೀನಾಮೆಯನ್ನು ನೀಡಬಹುದು, ಆದರೆ ರಾಜ್ಯಪಾಲರು ರಾಜೀನಾಮೆಯನ್ನು ಅಂಗೀಕರಿಸುವವರೆಗೆ ಆಯುಕ್ತರು ತಮ್ಮ ಹುದ್ದೆಯಲ್ಲಿ ಮುಂದುವರೆಯತಕ್ಕದ್ದು;
(2ಬಿ) (5)ನೇ ಉಪಪ್ರಕರಣದ ಅಡಿಯಲ್ಲಿ ಆಯುಕ್ತರು ರಾಜೀನಾಮೆ ಸಲ್ಲಿಸಿದ ಅಥವಾ ಇತರ ಬೇರಾವುದೇ ಕಾರಣಕ್ಕೆ ತೆರವಾದ ತಾತ್ಕಾಲಿಕ ಹುದ್ದೆಯನ್ನು ಹೊಸದಾಗಿ ನೇಮಕ ಮಾಡುವ ಮೂಲಕ ತುಂಬಬಹುದು:
ಪರಂತು, ಅಂಥ ನೇಮಕವನ್ನು ಆದಷ್ಟು ಬೇಗನೆ ಅಂದರೆ ಆ ಹುದ್ದೆಯು ತೆರವಾದ ದಿನಾಂಕದಿಂದ ಒಂದು ತಿಂಗಳ ಒಳಗೆ ಮಾಡತಕ್ಕದ್ದು.
(2ಸಿ) ಸರ್ಕಾರವು ರಾಜ್ಯ ಚುನಾವಣಾ ಆಯುಕ್ತರ ಹಣಕಾಸು ಅಧಿಕಾರಗಳನ್ನು ನಿರ್ದಿಷ್ಟಪಡಿಸತಕ್ಕದ್ದು ಮತ್ತು ಚುನಾವಣೆಗಳನ್ನು ನಡೆಸುವುದಕ್ಕೆ ಅಗತ್ಯವಿರುವ ಹಣಕಾಸನ್ನು ಸುಗಮವಾಗಿ ಪಡೆಯುವುದಕ್ಕೆ ಅವಕಾಶ ಇರುವುದನ್ನು ಮತ್ತು ಲೆಕ್ಕದ ವಿವಿಧ ಶೀರ್ಷಿಕೆಗಳ ನಡುವೆ ನಿಧಿಗಳನ್ನು ವರ್ಗಾಯಿಸುವುದಕ್ಕೆ ಸಹ ಮುಕ್ತ ಅವಕಾಶ ಇರುವುದನ್ನು ಸುನಿಶ್ಚಿತಪಡಿಸಿಕೊಂಡು ಸಿಬ್ಬಂದಿ ವರ್ಗದವರಿಗೆ ಮತ್ತು ಚುನಾವಣೆಗೆ ಸಂಬಂಧಿಸಿದಂತೆ ತಗಲುವ ಖರ್ಚುವೆಚ್ಚಗಳನ್ನು ನಿರ್ವಹಿಸುವುದಕ್ಕೆ ಮತ್ತು ಪ್ರಕಾರ್ಯಗಳಿಗೆ ಮತ್ತು ಹೊಣೆಗಾರಿಕೆಗಳಿಗೆ ಅನುಗುಣವಾಗಿ ನಿಧಿಗಳನ್ನು ಹಂಚಿಕೆ ಮಾಡತಕ್ಕದ್ದು.
(2ಡಿ) ರಾಜ್ಯ ಚುನಾವಣಾ ಆಯೋಗವು ತನ್ನದೇ ಆದ ಕಾರ್ಯ ವಿಧಾನವನ್ನು ನಿರ್ಧರಿಸತಕ್ಕದ್ದು.]1
1. 2015ರ ಅಧಿನಿಯಮ ಸಂಖ್ಯೆ 44ರ ಮೂಲಕ ದಿನಾಂಕ: 25.02.2016ರಿಂದ ಸೇರಿಸಲಾಗಿದೆ.
ಪರಂತು, ಉಚ್ಚ ನ್ಯಾಯಾಲಯದ ನ್ಯಾಯಾಧೀಶರನ್ನು, ರಾಜ್ಯ ಉಚ್ಚ ನ್ಯಾಯಾಲಯವು ಅವರನ್ನು ಹುದ್ದೆಯಿಂದ ತೆಗೆದುಹಾಕುವಂತಹುದೇ ರೀತಿಯ ಮತ್ತು ಅಂಥವೇ ಆಧಾರಗಳ ಹೊರತು, ರಾಜ್ಯ ಚುನಾವಣಾ ಕವಿೂಷನರರನ್ನು ಹುದ್ದೆಯಿಂದ ತೆಗೆದುಹಾಕತಕ್ಕದ್ದಲ್ಲ ಮತ್ತು ರಾಜ್ಯ ಚುನಾವಣಾ ಕವಿೂಷನರರ ಸೇವಾ ಷರತ್ತುಗಳು, ಅವರ ನೇಮಕಾತಿ ನಂತರ ಅವರಿಗೆ ಅನನುಕೂಲವಾಗುವಂತೆ ಬದಲಾಗತಕ್ಕದ್ದಲ್ಲ.
(3) ರಾಜ್ಯಪಾಲರು, (1)ನೇ ಉಪಪ್ರಕರಣದ ಮೇರೆಗೆ ರಾಜ್ಯ ಚುನಾವಣಾ ಆಯೋಗಕ್ಕೆ ಪ್ರದತ್ತವಾದ ಕರ್ತವ್ಯಗಳನ್ನು ನಿರ್ವಹಿಸಲು ಅವಶ್ಯಕವಾಗಿರಬಹುದಾದಂಥ ಸಿಬ್ಬಂದಿಯನ್ನು, ರಾಜ್ಯ ಚುನಾವಣಾ ಆಯೋಗವು ಹಾಗೆ ಕೋರಿದಾಗ ಅದಕ್ಕೆ ದೊರೆಯುವಂತೆ ಮಾಡತಕ್ಕದ್ದು.
1[`ಪರಂತು, ರಾಜ್ಯ ಚುನಾವಣಾ ಆಯುಕ್ತರು ಪಂಚಾಯತ್ಗಳ ಚುನಾವಣೆಗಳನ್ನು ನಡೆಸುವುದಕ್ಕಾಗಿ ರಾಜ್ಯ ಸಾರ್ವಜನಿಕ ವಲಯಗಳ ಉದ್ದಿಮೆಗಳ ಉದ್ಯೋಗಿಗಳನ್ನು ಸಹ ನಿಯೋಜಿಸಿಕೊಳ್ಳಬಹುದು ಮತ್ತು ಸ್ಥಳೀಯ ಪೊಲೀಸರು ಸೇರಿದಂತೆ ಸಾರ್ವಜನಿಕ ನೌಕರರ ಯಾವುದೇ ವರ್ಗವನ್ನು ಪಂಚಾಯತ್ಗಳಿಗೆ ಸಂಬಂಧಿಸಿದ ಚುನಾವಣಾ ಕರ್ತವ್ಯಗಳಲ್ಲಿ ನಿಯೋಜಿಸಿಕೊಳ್ಳುವುದನ್ನು ಬಿಟ್ಟುಬಿಡಬಹುದು.]1
1. 2015ರ ಅಧಿನಿಯಮ ಸಂಖ್ಯೆ 44ರ ಮೂಲಕ ದಿನಾಂಕ: 25.02.2016ರಿಂದ ಸೇರಿಸಲಾಗಿದೆ.
1[2[308ಎ. ಕೆಲವು ಪ್ರಾಧಿಕಾರಗಳ ಸಿಬ್ಬಂದಿಯನ್ನು ಚುನಾವಣಾ ಕೆಲಸಕ್ಕೆ ಲಭ್ಯವಾಗುವಂತೆ ಮಾಡುವುದು.- (1) (2)ನೇ ಉಪಪ್ರಕರಣ ನಿದರ್ಿಷ್ಟಪಡಿಸಿರುವ ಪ್ರಾಧಿಕಾರಗಳು ಚುನಾವಣೆಗೆ ಸಂಬಂಧಿಸಿದಂತೆ ಯಾವುದೇ ಕರ್ತವ್ಯಗಳನ್ನು ನಿರ್ವಹಿಸುವುದಕ್ಕೆ ಅಗತ್ಯವಾಗಬಹುದಾದಷ್ಟು ಸಿಬ್ಬಂದಿಯನ್ನು ಯಾರೇ ರಿಟರ್ನಿಂಗ್ ಆಫೀಸರ್ಗೆ ಲಭ್ಯವಾಗುವಂತೆ ಮಾಡಬೇಕೆಂದು ರಾಜ್ಯ ಚುನಾವಣಾ ಆಯುಕ್ತರು ಕೋರಿದ ಸಂದರ್ಭದಲ್ಲಿ, ಆ ಸಿಬ್ಬಂದಿ ವರ್ಗದವರನ್ನು ಆ ಪ್ರಾಧಿಕಾರಗಳು ಒದಗಿಸತಕ್ಕದ್ದು.
(2) (1)ನೇ ಉಪಪ್ರಕರಣದ ಉದ್ದೇಶಕ್ಕಾಗಿ ಈ ಮುಂದಿನವುಗಳು ಪ್ರಾಧಿಕಾರಗಳಾಗಿ ಇರತಕ್ಕದ್ದು, ಎಂದರೆ:-
ಪ್ರತಿಯೊಂದು ಸ್ಥಳೀಯ ಪ್ರಾಧಿಕಾರ;
ಕಾನೂನಿನ ಅಡಿಯಲ್ಲಿ ಸ್ಥಾಪಿತವಾಗಿರುವ ಪ್ರತಿಯೊಂದು ವಿಶ್ವವಿದ್ಯಾನಿಲಯ;
ಸರ್ಕಾರಿ ಕಂಪನಿ;
ಸರ್ಕಾರದ ನಿಯಂತ್ರಣದಲ್ಲಿರುವ ಅಥವಾ ಸರ್ಕಾರದಿಂದ ನೇರವಾಗಿ ಹಣಕಾಸು ಸೌಲಭ್ಯವನ್ನು ಪಡೆಯುತ್ತಿರುವ ಬ್ಯಾಂಕ್ಗಳು, ನಿಗಮ ಅಥವಾ ಉದ್ಯಮ.
308ಎಎ. ಚುನಾವಣೆಗಳ ವೇಳಾಪಟ್ಟಿ.- ರಾಜ್ಯ ಚುನಾವಣಾ ಆಯೋಗವು ಪಂಚಾಯತ್ನ ಅವಧಿಯು ಪೂರ್ಣಗೊಳ್ಳುವುದಕ್ಕೆ ಮೊದಲು ಚುನಾವಣಾ ಪ್ರಕ್ರಿಯೆಯನ್ನು ಪೂರ್ಣಗೊಳಿಸತಕ್ಕದ್ದು ಮತ್ತು ಚುನಾವಣಾ ವೇಳಾಪಟ್ಟಿಯ ಅಧಿಸೂಚನೆಯನ್ನು ಹೊರಡಿಸುವುದಕ್ಕೂ ಮೊದಲಿನ ನಲವತ್ತೈದು ದಿನಗಳಿಗೆ ಕಡಿಮೆ ಇಲ್ಲದಂತೆ ಸ್ಥಾನಗಳ ಮೀಸಲಾತಿಯನ್ನು ಮತ್ತು ಚುನಾವಣಾ ವೇಳಾಪಟ್ಟಿಯನ್ನು ಘೋಷಿಸತಕ್ಕದ್ದು.
308ಎಬಿ. ನಾಮ ಪತ್ರಗಳನ್ನು ಸಲ್ಲಿಸುವುದು ಮೊದಲಾದವುಗಳಿಗಾಗಿ ದಿನಾಂಕಗಳ ಅಧಿಸೂಚನೆ. (1) ಸದಸ್ಯನನ್ನು ಆಯ್ಕೆ ಮಾಡುವಂತೆ ಚುನಾವಣಾ ಕ್ಷೇತ್ರವನ್ನು ಕೋರುವ ಅಧಿಸೂಚನೆಯನ್ನು ಹೊರಡಿಸಿದ ಕೂಡಲೇ, 1[ಚುನಾವಣಾಧಿಕಾರಿಯು]1 ರಾಜ್ಯಪತ್ರದಲ್ಲಿ ಅಧಿಸೂಚನೆಯ ಮೂಲಕ,-
(ಎ) ನಾಮ ಪತ್ರಗಳನ್ನು ಸಲ್ಲಿಸುವುದಕ್ಕೆ ಕೊನೆಯ ದಿನಾಂಕವನ್ನು ಗೊತ್ತುಪಡಿಸತಕ್ಕದ್ದು, ಆ ಕೊನೆಯ ದಿನಾಂಕವು ಮೊದಲು ಹೇಳಿರುವ ಅಧಿಸೂಚನೆಯ ಪ್ರಕಟಣೆಯ ದಿನಾಂಕದ ತರುವಾಯ ಬರುವ ಮೂರನೆಯ ದಿನವಾಗಿರತಕ್ಕದ್ದು ಅಥವಾ ಆ ದಿನವು ಸಾರ್ವಜನಿಕ ರಜಾ ದಿನವಾಗಿದ್ದರೆ, ಸಾರ್ವತ್ರಿಕ ರಜಾ ದಿನವಾಗಿರದ, ತರುವಾಯ ಬರುವ ದಿನವಾಗಿರತಕ್ಕದ್ದು;
(ಬಿ) ನಾಮಪತ್ರಗಳ ಪರಿಶೀಲನೆಗೆ ದಿನಾಂಕವನ್ನು ಗೊತ್ತುಪಡಿಸತಕ್ಕದ್ದು. ಆ ದಿನಾಂಕವು ನಾಮಪತ್ರಗಳನ್ನು ಸಲ್ಲಿಸುವ ಕೊನೆಯ ದಿನಾಂಕಕ್ಕೆ ನಿಕಟ ತರುವಾಯದ ದಿನವಾಗಿರತಕ್ಕದ್ದು ಅಥವಾ ಆ ದಿನವು ಸಾರ್ವಜನಿಕ ರಜಾ ದಿನವಾಗಿದ್ದರೆ, ಸಾರ್ವತ್ರಿಕ ರಜಾ ದಿನವಾಗಿರದ ತರುವಾಯ ಬರುವ ದಿನವಾಗಿರತಕ್ಕದ್ದು;
(ಸಿ) ನಾಮಪತ್ರಗಳನ್ನು ವಾಪಸ್ಸು ಪಡೆಯುವುದಕ್ಕೆ ಕೊನೆಯ ದಿನಾಂಕವನ್ನು ಗೊತ್ತುಪಡಿಸತಕ್ಕದ್ದು. ಆ ಕೊನೆಯ ದಿನಾಂಕವು ನಾಮಪತ್ರಗಳ ಪರಿಶೀಲನೆಗೆ ಗೊತ್ತುಪಡಿಸಿರುವ ದಿನಾಂಕದ ತರುವಾಯದ ಎರಡನೆಯ ದಿನವಾಗಿರತಕ್ಕದ್ದು ಅಥವಾ ಆ ದಿನವು ಸಾರ್ವಜನಿಕ ರಜಾ ದಿನವಾಗಿದ್ದರೆ, ಸಾರ್ವತ್ರಿಕ ರಜಾ ದಿನವಾಗಿರದ ತರುವಾಯ ಬರುವ ದಿನವಾಗಿರತಕ್ಕದ್ದು;
(ಡಿ) ಮತದಾನವು, ಅವಶ್ಯವಾದರೆ, ಮತದಾನಕ್ಕೆ ದಿನಾಂಕವನ್ನು ಅಥವಾ ದಿನಾಂಕಗಳನ್ನು ಗೊತ್ತುಪಡಿಸತಕ್ಕದ್ದು ಅಥವಾ ಆ ಪೈಕಿ ಮೊದಲನೆಯ ದಿನಾಂಕವು ಗ್ರಾಮ ಪಂಚಾಯತ್ಗೆ ನಡೆಯುವ ಚುನಾವಣೆ ಸಂದರ್ಭದಲ್ಲಿ, ಐದನೆಯ ದಿನಕ್ಕೆ ಮುಂಚಿನದಲ್ಲದ ದಿನಾಂಕವಾಗಿರತಕ್ಕದ್ದು ಮತ್ತು ತಾಲ್ಲೂಕು ಪಂಚಾಯತ್ಗಳಿಗೆ ಮತ್ತು ಜಿಲ್ಲಾ ಪಂಚಾಯತ್ಗೆ ಚುನಾವಣೆ ಸಂದರ್ಭದಲ್ಲಿ ಉಮೇದುವಾರಿಕೆಗಳನ್ನು ವಾಪಸ್ಸು ಪಡೆಯುವುದಕ್ಕೆ ನಿಗದಿ ಮಾಡಿದ ಕೊನೆಯ ದಿನಾಂಕದ ತರುವಾಯದ ಏಳನೆಯ ದಿನಕ್ಕಿಂತ ಮುಂಚಿನ ದಿನಾಂಕವಾಗಿರತಕ್ಕದ್ದು;
(ಇ) ಯಾವ ದಿನಾಂಕಕ್ಕೆ ಮುಂಚೆ ಚುನಾವಣೆಯನ್ನು ಮುಕ್ತಾಯಗೊಳಿಸತಕ್ಕದ್ದೋ ಆ ದಿನಾಂಕವನ್ನು ಗೊತ್ತುಪಡಿಸತಕ್ಕದ್ದು;
(ಎಫ್) ಪಂಚಾಯತ್ಗಳಿಗೆ ಸದಸ್ಯರ ಚುನಾವಣಾ ಪ್ರಕ್ರಿಯೆಯನ್ನು ಸಾಧ್ಯವಾಗಬಹುದಾದಷ್ಟರ ಮಟ್ಟಿಗೆ ಚುನಾವಣಾ ಅಧಿಸೂಚನೆಯನ್ನು ಹೊರಡಿಸಿದ ಹತ್ತು ಕೆಲಸದ ದಿನಗಳೊಳಗೆ ಮುಕ್ತಾಯಗೊಳಿಸತಕ್ಕದ್ದು."
1. 2017ರ ಅಧಿನಿಯಮ ಸಂಖ್ಯೆ 37ರ ಮೂಲಕ ದಿನಾಂಕ: 12.07.2017ರಿಂದ ಪ್ರತಿಯೋಜಿಸಲಾಗಿದೆ.
308ಎಸಿ. ಚುನಾವಣೆ ಕಾಲದಲ್ಲ್ಲಿ ಭ್ರಷ್ಟಾಚಾರಗಳನ್ನು ತಡೆಗಟ್ಟುವುದು.-(1)ಚುನಾವಣಾ ಕಾಲದಲ್ಲಿ ಲಂಚಗುಳಿತನ ಮತ್ತು ಅನಗತ್ಯ ಪ್ರಭಾವ ಬೀರುವಂತಹ ಭ್ರಷ್ಟಾಚಾರಗಳನ್ನು ತಡೆಯುವ ದೃಷ್ಟಿಯಿಂದ, ರಾಜ್ಯ ಚುನಾವಣಾ ಆಯೋಗವು ಈ ಮುಂದಿನ ಕ್ರಮಗಳನ್ನು ಕೈಗೊಳ್ಳತಕ್ಕದ್ದು, ಎಂದರೆ:-
(ಎ) ನೀತಿ ಸಂಹಿತೆಯನ್ನು ಚುನಾವಣಾ ಅಧಿಸೂಚನೆಯನ್ನು ಹೊರಡಿಸಿದ ದಿನಾಂಕದಿಂದ ಫಲಿತಾಂಶಗಳನ್ನು ಘೋಷಿಸುವ ದಿನಾಂಕದವರೆಗೆ ಜಾರಿಗೆ ತರತಕ್ಕದ್ದು;
(ಬಿ) ರಿಟರ್ನಿಂಗ್ ಆಫೀಸರ್ಗಳು ಪ್ರತಿಯೊಂದು ಮತಗಟ್ಟೆಯಲ್ಲಿ ಚುನಾವಣಾ ಪ್ರಕ್ರಿಯೆಗಳ ವಿಡಿಯೋ-ಗ್ರಾಫಿಕ್ ಚಿತ್ರೀಕರಣ ಮಾಡಿರುವುದನ್ನು ಖಚಿತಪಡಿಸಿಕೊಳ್ಳತಕ್ಕದ್ದು;
(ಸಿ) ಯಾವ ಪಂಚಾಯತ್ ಪ್ರದೇಶದಲ್ಲಿ ನೀತಿ ಸಂಹಿತೆಯು ಜಾರಿಯಲ್ಲಿರುತ್ತದೋ ಆ ಪಂಚಾಯತ್ ಪ್ರದೇಶದ ಒಳಗೆ ನೀತಿ ಸಂಹಿತೆಯು ಜಾರಿಯಲ್ಲಿರುವ ಇಡೀ ಅವಧಿವರೆಗೆ ಎಲ್ಲ ಮದ್ಯದ ಅಂಗಡಿಗಳನ್ನು ಹಾಗೂ ಮದ್ಯ ತಯಾರಿಕಾ ಘಟಕಗಳನ್ನು ಮುಚ್ಚತಕ್ಕದ್ದು. ಮದ್ಯದ ಅಂಗಡಿಗಳ ಮತ್ತು ಮದ್ಯ ತಯಾರಿಕಾ ಘಟಕಗಳ ಮಾಲೀಕರು, ಅಧಿಬೋಗದಾರರು ಮತ್ತು ಸಂದರ್ಭಾನುಸಾರವಾಗಿ ವ್ಯವಸ್ಥಾಪಕರು ಚುನಾವಣಾ ನೀತಿ ಸಂಹಿತೆಯು ಜಾರಿಯಲ್ಲಿರುವ ಅವಧಿಯಲ್ಲಿ ತಮ್ಮ ಘಟಕಗಳನ್ನು ಮುಚ್ಚತಕ್ಕದ್ದು ಮತ್ತು ಮೊಹರು ಮಾಡಿ ಕೀಯನ್ನು ಜಿಲ್ಲಾಧಿಕಾರಿಗಳಿಗೆ ಅಥವಾ ಅಧಿಕಾರ ವ್ಯಾಪ್ತಿಯುಳ್ಳ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ರವರಿಗೆ ಒಪ್ಪಿಸತಕ್ಕದ್ದು. ಆ ಕಾಲದಲ್ಲಿ ಯಾರಾದರೂ ಮದ್ಯವನ್ನು ಸ್ವಾಧೀನದಲ್ಲಿಟ್ಟು ಕೊಂಡಿರುವುದು ಅಥವಾ ಮದ್ಯವನ್ನು ಸೇವಿಸಿದ ತರುವಾಯ ಸಾರ್ವಜನಿಕ ಉಪದ್ರವ, ಬೀದಿ ರಂಪಾಟ ಮಾಡುತ್ತಿರುವುದು ಕಂಡುಬಂದರೆ ಮುನ್ನೆಚ್ಚರಿಕೆ ಕ್ರಮವಾಗಿ ಚುನಾವಣೆ ಮುಕ್ತಾಯವಾಗುವವರೆಗೆ ಅವರನ್ನು ಕಸ್ಟಡಿಯಲ್ಲಿ ಇಡತಕ್ಕದ್ದು. ನೀತಿ ಸಂಹಿತೆ ಜಾರಿಯಲ್ಲಿರುವ ಅವಧಿಯಲ್ಲಿ ಮಾಡುವ ಯಾವುದೇ ಉಲ್ಲಂಘನೆಗಳು ಸಂಜ್ಞೇಯ ಮತ್ತು ಜಾಮೀನುರಹಿತ ಅಪರಾಧಗಳಾಗತಕ್ಕದ್ದು ಮತ್ತು ತತ್ಕಾಲದಲ್ಲಿ ಜಾರಿಯಲ್ಲಿರುವ ಸುಸಂಗತ ಕಾನೂನಿನ ಮೇರೆಗೆ ಜುಲ್ಮಾನೆಯ ಮತ್ತು ಕಾರಾವಾಸ ಶಿಕ್ಷೆಯ 1. 2015ರ ಅಧಿನಿಯಮ ಸಂಖ್ಯೆ 44ರ ಮೂಲಕ ದಿನಾಂಕ: 25.02.2016ರಿಂದ ಪ್ರತಿಯೋಜಿಸಲಾಗಿದೆ.
ದಂಡನೆಗೆ ಒಳಪಡತಕ್ಕದ್ದು.]2
ಧ್ವಜದ ಅಧಿಕೃತ ಪ್ರದರ್ಶನ.
Clysin | Thursday, December 1, 2022
Next
« Prev Post
« Prev Post
Previous
Next Post »
Next Post »
No comments:
Post a Comment