(1) ಪ್ರತಿಯೊಂದು ತಾಲ್ಲೂಕಿನಲ್ಲಿ ಈ ಕೆಳಗಿನವುಗಳನ್ನೊಳಗೊಂಡ ತಾಲ್ಲೂಕು ಮಟ್ಟದಲ್ಲಿ ಯೋಜನೆಯ ಸಂಯೋಜನೆಯನ್ನು ಕೈಗೊಳ್ಳುವ ಉದ್ದೇಶಕ್ಕಾಗಿ ತಾಲ್ಲೂಕು ಯೋಜನೆ ಮತ್ತು ಅಭಿವೃದ್ಧಿ ಸಮಿತಿಯು ಸ್ಥಾಪಿತವಾಗತಕ್ಕದ್ದು, ಎಂದರೆ:-
(2) ಸಂಬಂಧಪಟ್ಟ ತಾಲ್ಲೂಕು ಪಂಚಾಯತಿಯ ಕಾರ್ಯನಿರ್ವಾಹಕ ಅಧಿಕಾರಿಯು ಸಮಿತಿಯ ಸದಸ್ಯ ಕಾರ್ಯದರ್ಶಿಯಾಗಿರತಕ್ಕದ್ದು.
(3) ಸಂಬಂಧಪಟ್ಟ ಜಿಲ್ಲಾ ಪಂಚಾಯತ್ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯು ವಿಶೇಷ ಆಹ್ವಾನಿತರು ಅಥವಾ ಪದನಿಮಿತ್ತ ಸದಸ್ಯರನ್ನು ನಾಮನಿರ್ದೇಶನ ಮಾಡತಕ್ಕದ್ದು. ಈ ಸದಸ್ಯರು ಪದಾವಧಿಯ ತಾಲ್ಲೂಕು ಪಂಚಾಯತಿಯ ಪದಾವಧಿಯೊಂದಿಗೆ ಮುಕ್ತಾಯವಾಗತಕ್ಕದ್ದು ಮತ್ತು ಪದನಿಮಿತ್ತ ಸದಸ್ಯರ ಪದಾವಧಿಯೊಂದಿಗೆ ಅಥವಾ ತಾಲ್ಲೂಕು ಪಂಚಾಯತಿಯ ಪದಾವಧಿಯೊಂದಿಗೆ ಇದರಲ್ಲಿ ಯಾವುದು ಮೊದಲೋ ಅದರೊಂದಿಗೆ ಮುಕ್ತಾಯವಾಗತಕ್ಕದ್ದು.
309ಇ. ಯೋಜನೆ ಮತ್ತು ಅಭಿವೃದ್ಧಿಯ ಕಾರ್ಯವಿಧಾನ.- (1) ತಾಲ್ಲೂಕು ಯೋಜನೆ ಮತ್ತು ಅಭಿವೃದ್ಧಿ ಸಮಿತಿಯು ಎಲ್ಲಾ ಪಂಚಾಯತಿಗಳ ಮತ್ತು ನಗರ ಸ್ಥಳೀಯ ಸ್ವಯಂ ಆಡಳಿತಗಳು ಸಲ್ಲಿಸಿದ ಕರಡು ವಾರ್ಷಿಕ ಯೋಜನೆಗಳನ್ನು ಸ್ವೀಕರಿಸತಕ್ಕದ್ದು ಮತ್ತು ತಾಲ್ಲೂಕು ಮಟ್ಟದಲ್ಲಿ ಪ್ರತಿಯೊಂದು ವಲಯದ ಆದ್ಯತೆಗಳನ್ನು ವಲಯವಾರು ಗುರುತಿಸಿ ಕ್ರೋಢೀಕರಿಸತಕ್ಕದ್ದು.
(2) ಆದ್ಯತೆ ನಕಾಶೆ ಮತ್ತು ಯೋಜನೆಗಳ ಕ್ರೋಢೀಕರಣ ವಿಧಾನವನ್ನು ಅನುಸರಿಸಿ ಆದ್ಯತೆ ವಿಷಯಗಳ ಮೂಲಕ ಮಧ್ಯಂತರ ಮಟ್ಟದಲ್ಲಿ ಸಂಯೋಜನೆ ಕಾರ್ಯವಿಧಾನವನ್ನು ಸಾಧಿಸತಕ್ಕದ್ದು.
(3) ಈ ಪ್ರಕರಣದಲ್ಲಿ ಒಳಗೊಂಡಿರುವುದಾವುದೂ ಗ್ರಾಮ ಪಂಚಾಯತಿಗಳ ತಾಲ್ಲೂಕು ಪಂಚಾಯತ್ ಅಥವಾ ಸಂದರ್ಭಾನುಸಾರವಾಗಿ ನಗರ ಸ್ಥಳೀಯ ಸ್ವಯಂ ಆಡಳಿತಗಳ ಯೋಜನೆಗಳಲ್ಲಿ ಶಿಫಾರಸ್ಸುಗಳು ಮತ್ತು ಆದ್ಯತೆ ಬದಲಾಯಿಸಲು, ಮಾರ್ಪಡಿಸಲು ಅಥವಾ ವ್ಯತ್ಯಾಸಗೊಳಿಸಲು ತಾಲ್ಲೂಕು ಯೋಜನೆ ಮತ್ತು ಅಭಿವೃದ್ಧಿ ಸಮಿತಿಗೆ ಅಧಿಕಾರವಿಲ್ಲ ಎಂದು ಅರ್ಥೈಸತಕ್ಕದ್ದು.
(4) ಸ್ಥಳೀಯ ಸ್ವಯಂ ಆಡಳಿತಗಳ ಪ್ರತಿಯೊಂದು ಪ್ರತ್ಯೇಕ ಘಟಕದ ಆದ್ಯತೆಗಳನ್ನು ಗುರುತಿಸುವ ಗುರಿಯೊಂದಿಗೆ ಕ್ರೋಢೀಕರಣದ ಪರಿಣಾಮವಾಗಿ ಮಧ್ಯಂತರ ಮಟ್ಟದಲ್ಲಿ ಯೋಜನೆಯು ಮುಂದಿನವುಗಳನ್ನು ಒಳಗೊಳ್ಳತಕ್ಕದ್ದು, ಎಂದರೆ:-
. ಒಂದು ಅಥವಾ ಹೆಚ್ಚಿನ ಸ್ಥಳೀಯ ಪ್ರಾಧಿಕಾರಗಳ ಮೂಲಕ ನಡೆಯುವ ಸ್ಕೀಮ್ಗಳ ಸ್ಥಳ ವಿಸ್ತಾರದ ಸಂಯೋಜನೆ, ಸಾಧನೆಗಳ ಸಂಯೋಜನೆ.
. ಅಂತರ ವಲಯಕ್ಕೆ ಸಂಬಂಧಿಸಿದ ಹಲವಾರು ಸ್ಕೀಮ್ಗಳ ಸಂಯೋಜನೆ ಎಂದು ಅರ್ಥೈಸಲಾಗುವ ವಲಯವಾರು ಸಂಯೋಜನೆ,
. ಅಂತರ್ವಲಯ ಸಂಯೋಜನೆ ಎಂದರೆ ವಿವಿಧ ಸ್ಕೀಮ್ಗಳಿಂದ ಸಂಪನ್ಮೂಲಗಳನ್ನು ಸೆಳೆಯುವ ಮೂಲಕ ವಿವಿಧ ಮಧ್ಯಪ್ರವೇಶದಿಂದ ಗರಿಷ್ಠ ಪ್ರಭಾವವನ್ನು ಖಚಿತಪಡಿಸುವುದಕ್ಕಾಗಿ ಗುರಿಯಾಗಿರುವುದು.
ತ. ನೇರ ಸಂಯೋಜನೆ ಎಂದರೆ ಉನ್ನತ ಪಂಚಾಯತ್ ಮಟ್ಟಗಳಲ್ಲಿ ಏನು ಮಾಡಬೇಕಿದೆ ಅದನ್ನು ಪ್ರತ್ಯೇಕಗೊಳಿಸುವುದು.
ತ. ಸಂಪನ್ಮೂಲಗಳ ಸಂಯೋಜನೆ ಎಂದರೆ; ಪಂಚಾಯತ್ ಬಳಸಬಹುದಾದ ಸ್ಥಳೀಯ ಯೋಜನೆಗಳೊಳಗೆ ಸಂಯೋಜಿಸಬಹುದಾದ ಮತ್ತು ಯಾವುದಕ್ಕೂ ಅವು ಹೆಚ್ಚುವರಿ ಸಂಪನ್ಮೂಲಗಳನ್ನು ಕೊಡುಗೆ ನೀಡಬಹುದೇ ಅಂತಹ ಕೇಂದ್ರ ಪ್ರಾಯೋಜಿತ ಮತ್ತು ರಾಜ್ಯ ಪ್ರಾಯೋಜಿತ ಎರಡೂ ವಿವಿಧ ಸ್ಕೀಮ್ಗಳ ವಗರ್ೀಕರಣವನ್ನು ಗುರುತಿಸುವುದು ಮತ್ತು ಯೋಜಿಸುವುದನ್ನು ಗಮನಿಸುವುದು.
309ಎಫ್. ಜಿಲ್ಲಾ ಪಂಚಾಯತ್ ಯೋಜನೆ.-ಜಿಲ್ಲಾ ಪಂಚಾಯತಿಗಳು ಜಿಲ್ಲಾ ಪಂಚಾಯತ್ನ ಕರಡು ಯೋಜನೆಯನ್ನು ಸಿದ್ದಪಡಿಸುವುದು ಮತ್ತು ಜಿಲ್ಲಾ ಮಟ್ಟದಲ್ಲಿ ತಾಲ್ಲೂಕು ಪಂಚಾಯತಿಗಳ ಯೋಜನೆಗಳನ್ನು ಕ್ರೋಢೀಕರಿಸುವುದು ಮತ್ತು ಜಿಲ್ಲಾ ಯೋಜನಾ ಸಮಿತಿಯ ಮುಂದೆ ಮಂಡಿಸುವುದಕ್ಕೆ ಜವಾಬ್ದಾರರಾಗತಕ್ಕದ್ದು.
309ಜಿ. ಜಿಲ್ಲಾ ಅಭಿವೃದ್ಧಿ ಯೋಜನೆ.- (1) ಜಿಲ್ಲಾ ಯೋಜನಾ ಸಮಿತಿಯು ಅನುದಾನ ಲಭ್ಯತೆಗೆ ಒಳಪಟ್ಟು, ಈ ಕೆಳಗಿನವುಗಳ ಕುರಿತಂತೆ ಕರಡು ಅಭಿವೃದ್ಧಿ ಯೋಜನೆಯನ್ನು ಸಿದ್ದಪಡಿಸತಕ್ಕದ್ದು, ಎಂದರೆ:-
ಸ್ಥಳ ವಿಸ್ತಾರ ಯೋಜನೆ, ನೀರಿನ ಹಂಚಿಕೆ ಮತ್ತು ಇತರ ಭೌತಿಕ ಮತ್ತು ನೈಸರ್ಗಿಕ ಸಂಪನ್ಮೂಲ, ಮೂಲಸೌಕರ್ಯಗಳ ಅಭಿವೃದ್ಧಿ ಮತ್ತು ಪರಿಸರ ಸಂರಕ್ಷಣೆಯ ಒಳಗೊಂಡಂತೆ ಜಿಲ್ಲೆಯಲ್ಲಿ ಪಂಚಾಯತಿಗಳು ಮತ್ತು ನಗರ ಸ್ಥಳೀಯ ಪ್ರಾಧಿಕಾರಗಳ ನಡುವೆ ಸಮಾನ ಆಸಕ್ತಿಗಳ ವಿಷಯಗಳು;
ಹಣಕಾಸು ಅಥವಾ ಲಭ್ಯವಿರುವ ಸಂಪನ್ಮೂಲಗಳ ವ್ಯಾಪ್ತಿ ಮತ್ತು ವಿಧಾನ. (2) ಜಿಲ್ಲಾ ಯೋಜನಾ ಸಮಿತಿಯು ಪಂಚಾಯತ್ಗಳು ಮತ್ತು ನಗರ ಸ್ಥಳೀಯ ಮತ್ತು ಇತರ ಯೋಜನಾ ಘಟಕಗಳ ಯೋಜನೆಗಳನ್ನು, ಅವುಗಳು ನಡುವೆ ಪರಸ್ಪರ ಸಮಾಲೋಚನೆ ಮತ್ತು ವ್ಯವಹರಿಸುವುದಕ್ಕೆ ಅವಕಾಶ ಕಲ್ಪಿಸುವುದಕ್ಕಾಗಿ ಜೋಡಿಸುವುದು ಮತ್ತು ಗ್ರಾಮೀಣ ಯೋಜನೆಗಳ ವಲಯ ಮತ್ತು ಸ್ಥಳವಿಸ್ತಾರ ವಿಷಯಗಳನ್ನು ಸಂಯೋಜಿಸುವುದಕ್ಕಾಗಿ ಚೌಕಟ್ಟನ್ನು ಕಲ್ಪಿಸುವುದು.
(3) ಜಿಲ್ಲಾ ಯೋಜನಾ ಸಮಿತಿಯ ಕ್ರೋಢೀಕರಣ ಮತ್ತು ಸಂಯೋಜನಾ ಕಾರ್ಯವಿಧಾನವು ತಾಲ್ಲೂಕು ಯೋಜನೆ ಮತ್ತು ಅಭಿವೃದ್ಧಿ ಸಮಿತಿಯು ಸಿದ್ದಪಡಿಸಿದ ಯೋಜನೆಗಳನ್ನು ವ್ಯತ್ಯಾಸಗೊಳಿಸತಕ್ಕದ್ದಲ್ಲ. ಆದರೆ ಈಗಾಗಲೇ ಮೊದಲು ಸೇರಿರುವ ಅಥವಾ ಯೋಜನೆಗಳಲ್ಲಿ ಒಳಗೊಂಡಿರುವ ಯೋಜನೆಗಳನ್ನು ಸೇರಿಸತಕ್ಕದ್ದಲ್ಲ.
(4) ಜಿಲ್ಲಾ ಯೋಜನಾ ಸಮಿತಿಯು ಕ್ರೋಢೀಕೃತ ಯೋಜನೆಯನ್ನು ಸಿದ್ದಪಡಿಸುವಾಗ, ಸರ್ಕಾರವು ಆದೇಶದ ಮೂಲಕ ನಿರ್ದಿಷ್ಟಪಡಿಸುವ ಅಂಥ ಸಂಸ್ಥೆಗಳು ಮತ್ತು ಸಂಘಗಳೊಂದಿಗೆ ಸಮಾಲೋಚಿಸತಕ್ಕದ್ದು.
(5) ಕ್ರೋಢೀಕರಣ ಮತ್ತು ಸಂಯೋಜನೆಯ ಕಾರ್ಯವಿಧಾನವು ಪೂರ್ಣವಾದ ತರುವಾಯ, ಜಿಲ್ಲಾ ಯೋಜನಾ ಸಮಿತಿಯ ರಾಜ್ಯ ಯೋಜನೆಗಳ ಸಂಯೋಜನೆಗೊಳ್ಳುವುದಕ್ಕಾಗಿ ವಿಕೇಂದ್ರಿಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿಯ ಮೂಲಕ ಸರ್ಕಾರಕ್ಕೆ ಜಿಲ್ಲೆಯ ಯೋಜನೆಗಳನ್ನು ಕಳುಹಿಸತಕ್ಕದ್ದು.
309ಎಚ್. ಕೈಗೊಂಡ ಕ್ರಮದ ವರದಿ.- (1) ಗ್ರಾಮ ಪಂಚಾಯತ, ತಾಲ್ಲೂಕು ಪಂಚಾಯತ, ಮತ್ತು ಜಿಲ್ಲಾ ಪಂಚಾಯತ್ಗಳು ಯೋಜನೆಗಳ ಪ್ರಗತಿಯ ಬಗ್ಗೆ ಮತ್ತು ಅವುಗಳನ್ನು ಅಳೆಯುವ ಸೂಚಿಗಳ ಪ್ರತಿಫಲವನ್ನು ಬಳಸುವ ಬಗ್ಗೆ ಸಂಪನ್ಮೂಲ ಲಭ್ಯತೆ ನಿರ್ಧರಿತ ಗುರಿಗಳನ್ನು ವಾರ್ಷಿಕ ಯೋಜನೆಯಲ್ಲಿ ಮಾಡಲಾದ ಪ್ರಾಜೆಕ್ಟ್ಗಳ ಮತ್ತು ಸ್ಕೀಮ್ಗಳ ಅನುಷ್ಠಾನ ಅಥವಾ ಮಾಡಲು ಅಸಮರ್ಥವಾದುದಕ್ಕೆ ಕಾರಣಗಳು ಇವುಗಳನ್ನು ಹೇಳುವ ಮತ್ತು ಕೈಗೊಂಡ ಕ್ರಮದ ವರದಿಯನ್ನು ಆರು ತಿಂಗಳಿಗೊಮ್ಮೆ ಸಿದ್ದಪಡಿಸತಕ್ಕದ್ದು.
(2) ಎಲ್ಲಾ ಗ್ರಾಮ ಪಂಚಾಯತಿಗಳು ಸಂಬಂಧಪಟ್ಟ ತಾಲ್ಲೂಕು ಪಂಚಾಯತಿಗೆ ತಮ್ಮ ವರದಿಯನ್ನು ಸಲ್ಲಿಸತಕ್ಕದ್ದು. ತಾಲ್ಲೂಕು ಪಂಚಾಯತಿಯು ಎಲ್ಲಾ ಗ್ರಾಮ ಪಂಚಾಯತಿಗಳ ವರದಿಗಳನ್ನು ಕ್ರೋಢೀಕರಿಸತಕ್ಕದ್ದು ಮತ್ತು ತಮ್ಮದೇ ಆದ ವರದಿಯೊಂದಿಗೆ ಜಿಲ್ಲಾ ಪಂಚಾಯತಿಗೆ ಸಲ್ಲಿಸತಕ್ಕದ್ದು, ಮತ್ತು ಜಿಲ್ಲಾ ಪಂಚಾಯತಿಗಳು ಎಲ್ಲಾ ತಾಲ್ಲೂಕು ಪಂಚಾಯತಿಗಳ ವರದಿಗಳನ್ನು ಕ್ರೋಢೀಕರಿಸತಕ್ಕದ್ದು ಮತ್ತು ತಮ್ಮದೇ ಆದ ವರದಿಯೊಂದಿಗೆ ಅದನ್ನೆಲ್ಲಾ ಜಿಲ್ಲಾ ಯೋಜನಾ ಸಮಿತಿಗೆ ಸಲ್ಲಿಸತಕ್ಕದ್ದು.
(3) ಗ್ರಾಮ ಪಂಚಾಯತಿಗಳ ಸಂಯೋಜಿತ ವರದಿಯನ್ನು ತಮ್ಮ ಮುಂದಿನ ಗ್ರಾಮ ಸಭೆಗೆ ಮಂಡಿಸತಕ್ಕದ್ದು.
(4) ಹಾಗೆಯೇ ತಾಲ್ಲೂಕು ಮತ್ತು ಜಿಲ್ಲಾ ಪಂಚಾಯತಿಗಳ ವರದಿಗಳನ್ನು ಗ್ರಾಮ ಪಂಚಾಯತ್ಗಳಿಗೆ ಗ್ರಾಮ ಸಭೆಗೆ ಹಾಜರುಪಡಿಸುವುದಕ್ಕಾಗಿ ಲಭ್ಯವಾಗುವಂತೆ ಮಾಡತಕ್ಕದ್ದು.]1
1. 2015ರ ಅಧಿನಿಯಮ ಸಂಖ್ಯೆ 44ರ ಮೂಲಕ ದಿನಾಂಕ: 25.02.2016ರಿಂದ ಸೇರಿಸಲಾಗಿದೆ.
310. ಜಿಲ್ಲಾ ಯೋಜನಾ ಸಮಿತಿ. (1) ಸರ್ಕಾರವು, ಜಿಲ್ಲಾ ಪಂಚಾಯತಿಗಳು, ತಾಲ್ಲೂಕು ಪಂಚಾಯತಿಗಳು ಮತ್ತು ಗ್ರಾಮ ಪಂಚಾಯತಿಗಳು ಮತ್ತು 1[ಪಟ್ಟಣ ಪಂಚಾಯತಿಗಳು]1, ಜಿಲ್ಲೆಯಲ್ಲಿರುವ ಪುರಸಭಾ ಪರಿಷತ್ತುಗಳು ಮತ್ತು ನಗರ ಪೌರಸಭಾ ನಿಗಮಗಳ ಯೋಜನೆಗಳನ್ನು ಕ್ರೊಡೀಕರಿಸಲು ಮತ್ತು ಒಟ್ಟಾರೆ ಜಿಲ್ಲೆಗಾಗಿ ಒಂದು ಅಭಿವೃದ್ಧಿ ಯೋಜನೆಯ ಕರಡನ್ನು ತಯಾರಿಸಲು ಪ್ರತಿಯೊಂದು ಜಿಲ್ಲೆಗೂ ಒಂದೊಂದು ಜಿಲ್ಲಾ ಯೋಜನಾ ಸಮಿತಿಯನ್ನು ರಚಿಸತಕ್ಕದ್ದು.
1. 1997ರ ಅಧಿನಿಯಮ ಸಂಖ್ಯೆ: 29ರ ಮೂಲಕ ದಿನಾಂಕ: 20-10-1997ರಿಂದ ಪ್ರತಿಯೋಜಿಸಲಾಗಿದೆ.
1[(3) ಪೂರ್ತಿ ಜಿಲ್ಲೆ ಅಥವಾ ಜಿಲ್ಲೆಯ ಭಾಗವನ್ನು ಪ್ರತಿನಿಧಿಸುವ ಲೋಕಸಭೆಯ ಸದಸ್ಯರು, ಜಿಲ್ಲೆಯಲ್ಲಿ ಮತದಾರರೆಂದು ನೋಂದಣಿಯಾಗಿರುವ ರಾಜ್ಯಸಭಾ ಸದಸ್ಯರು, ಜಿಲ್ಲೆಯೊಳಗೆ ಇರುವ ಮತಕ್ಷೇತ್ರಗಳಲ್ಲಿನ ರಾಜ್ಯ ವಿಧಾನಸಭೆಯ ಎಲ್ಲಾ ಸದಸ್ಯರು ಜಿಲ್ಲೆಯಲ್ಲಿ ಮತದಾರರೆಂದು ನೋಂದಣಿಯಾಗಿರುವ ರಾಜ್ಯ ವಿಧಾನಪರಿಷತ್ನ ಸದಸ್ಯರು, ಜಿಲ್ಲೆಯ ಡೆಪ್ಯೂಟಿ ಕಮಿಷನರ್ರವರು ಜಿಲ್ಲಾ ಯೋಜನಾ ಸಮಿತಿಯ ಶಾಶ್ವತ ಆಹ್ವಾನಿತರಾಗಿರತಕ್ಕದ್ದು]1
1. 2015ರ ಅಧಿನಿಯಮ ಸಂಖ್ಯೆ 44ರ ಮೂಲಕ ದಿನಾಂಕ: 25.02.2016ರಿಂದ ಪ್ರತಿಯೋಜಿಸಲಾಗಿದೆ.
(4) ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯು ಸಮಿತಿಯ ಕಾರ್ಯದರ್ಶಿಯಾಗಿರತಕ್ಕದ್ದು.
2[1[5) ಜಿಲ್ಲಾ ಯೋಜನಾ ಸಮಿತಿಯ ಚೇರ್ಮನ್ರನ್ನು ನಿಯಮಿಸಬಹುದಾದ ಅಂಥ ವಿಧಾನದಲ್ಲಿ ಅವರುಗಳ ಪೈಕಿ ಆಯ್ಕೆ ಮಾಡತಕ್ಕದ್ದು.]1]2
1. 1997ರ ಅಧಿನಿಯಮ ಸಂಖ್ಯೆ: 29ರ ಮೂಲಕ ದಿನಾಂಕ: 20-10-1997ರಿಂದ ಪ್ರತಿಯೋಜಿಸಲಾಗಿದೆ.
2. 2015ರ ಅಧಿನಿಯಮ ಸಂಖ್ಯೆ 44ರ ಮೂಲಕ ದಿನಾಂಕ: 25.02.2016ರಿಂದ ಪ್ರತಿಯೋಜಿಸಲಾಗಿದೆ.
(6) ಜಿಲ್ಲಾ ಯೋಜನಾ ಸಮಿತಿಯು, ಜಿಲ್ಲಾ ಪಂಚಾಯತಿ, ತಾಲ್ಲೂಕು ಪಂಚಾಯತಿ, ಗ್ರಾಮ ಪಂಚಾಯತಿಗಳು, 1[ಪಟ್ಟಣ ಪಂಚಾಯತಿಗಳು]1 ಜಿಲ್ಲೆಯಲ್ಲಿರುವ ಪುರಸಭಾ ಪರಿಷತ್ತುಗಳು ಮತ್ತು ಪೌರಸಭಾ ನಿಗಮಗಳು ತಯಾರಿಸಿದ ಯೋಜನೆಗಳನ್ನು ಕ್ರೋಡೀಕರಿಸತಕ್ಕದ್ದು ಮತ್ತು ಇಡೀ ಜಿಲ್ಲೆಗಾಗಿ ಅಭಿವೃದ್ಧಿ ಯೋಜನೆಯ ಕರಡೊಂದನ್ನು ತಯಾರಿಸತಕ್ಕದ್ದು.
1. 1997ರ ಅಧಿನಿಯಮ ಸಂಖ್ಯೆ: 29ರ ಮೂಲಕ ದಿನಾಂಕ: 20-10-1997ರಿಂದ ಪ್ರತಿಯೋಜಿಸಲಾಗಿದೆ.
(7) ಪ್ರತಿಯೊಂದು ಜಿಲ್ಲಾ ಯೋಜನಾ ಸಮಿತಿಯು, ಅಭಿವೃದ್ಧಿ ಯೋಜನೆ ಕರಡನ್ನು ತಯಾರಿಸುವಲ್ಲಿ,
(ಎ) ಪ್ರಾದೇಶಿಕ ಯೋಜನೆ, ನೀರಿನ ಹಂಚಿಕೆ ಮತ್ತು ಇತರೆ ಭೌತಿಕ ಮತ್ತು ಪ್ರಾಕೃತಿಕ ಸಂಪನ್ಮೂಲಗಳ ಹಂಚಿಕೆ, ಮೂಲ ಪರಿಕರಗಳ ಸಮಗ್ರ ಅಭಿವೃದ್ಧಿ ಮತ್ತು ಪರಿಸರ ಸಂರಕ್ಷಣೆ ಇವುಗಳನ್ನು ಒಳಗೊಂಡಂತೆ ಜಿಲ್ಲಾ ಪಂಚಾಯತಿಗಳು, ತಾಲ್ಲೂಕು ಪಂಚಾಯತಿಗಳು, ಗ್ರಾಮ ಪಂಚಾಯತಿಗಳು, 1[ಪಟ್ಟಣ ಪಂಚಾಯತಿಗಳು]1, ಜಿಲ್ಲೆಯಲ್ಲಿರುವ ಪೌರಸಭಾ ನಿಗಮಗಳು ಮತ್ತು ಪೌರಸಭಾ ಪರಿಷತ್ತುಗಳ ನಡುವಣ ಸಮಾನ ಹಿತಾಸಕ್ತಿಯ ವಿಷಯಗಳನ್ನು;
1. 1997ರ ಅಧಿನಿಯಮ ಸಂಖ್ಯೆ: 29ರ ಮೂಲಕ ದಿನಾಂಕ: 20-10-1997ರಿಂದ ಪ್ರತಿಯೋಜಿಸಲಾಗಿದೆ.
ಲಭ್ಯವಿರುವ ಹಣಕಾಸು ಸಂಪನ್ಮೂಲ ಅಥವಾ ಇತರೆ ಸಂಪನ್ಮೂಲಗಳ ವ್ಯಾಪ್ತಿ ಮತ್ತು ಸ್ವರೂಪಗಳ ಬಗ್ಗೆ ಗಮನ ಹರಿಸತಕ್ಕದ್ದು: 1[ಪರಂತು, ()ನೇ ಬಾಬಿನಲ್ಲಿ ಉಲ್ಲೇಖಿಸಲಾದ ಸ್ಥಳೀಯ ಪ್ರಾಧಿಕಾರಗಳು ಸಿದ್ಧಪಡಿಸಿದ ಯೋಜನೆಗಳಲ್ಲಿ ಬದಲಾವಣೆಗಳನ್ನು ತರತಕ್ಕದ್ದಲ್ಲ. ಆದರೆ ಜಿಲ್ಲಾ ಯೋಜನಾ ಸಮಿತಿಯ ಶಿಫಾರಸುಗಳು ಯಾವುವಾದರೂ ಇದ್ದರೆ ಅವುಗಳನ್ನು ಯೋಜನೆಯನ್ನು ಅಂತಿಮಗೊಳಿಸುವುದಕ್ಕೆ ಮೊದಲು ಅಂಥ ಸ್ಥಳೀಯ ಪ್ರಾಧಿಕಾರಗಳು ಪರಿಶೀಲಿಸಬಹುದು.]1
1. 1997ರ ಅಧಿನಿಯಮ ಸಂಖ್ಯೆ: 29ರ ಮೂಲಕ ದಿನಾಂಕ: 20-10-1997ರಿಂದ ಸೇರಿಸಲಾಗಿದೆ.
(ಬಿ) ರಾಜ್ಯಪಾಲರು, ಆದೇಶದ ಮೂಲಕ ನಿರ್ದಿಷ್ಟಪಡಿಸಬಹುದಾದಂಥ ಸಂಘ ಸಂಸ್ಥೆಗಳ ಸಲಹೆ ತೆಗೆದುಕೊಳ್ಳುವುದು.
(8) ಪ್ರತಿಯೊಂದು ಜಿಲ್ಲಾ ಯೋಜನಾ ಸಮಿತಿಯ ಅಧ್ಯಕ್ಷರುಗಳು, ಅಂಥ ಸಮಿತಿಯಿಂದ ಶಿಫಾರಸ್ಸು ಮಾಡಿದಂತೆ ಅಭಿವೃದ್ಧಿ ಯೋಜನೆಯನ್ನು 1[ರಾಜ್ಯ ಯೋಜನೆಯಲ್ಲಿ ಸೇರಿಸುವ ಸಲುವಾಗಿ]1 ಸರ್ಕಾರಕ್ಕೆ ಸಲ್ಲಿಸತಕ್ಕದ್ದು.
1. 1997ರ ಅಧಿನಿಯಮ ಸಂಖ್ಯೆ: 29ರ ಮೂಲಕ ದಿನಾಂಕ: 20-10-1997ರಿಂದ ಸೇರಿಸಲಾಗಿದೆ.
No comments:
Post a Comment